ದ್ಧಿಕನ್ನಡ ವಾರ್ತೆ
Goa Beach Wedding : ಗೋವಾದ ಬೀಚ್ ನಲ್ಲಿ ಮದುವೆಯಾಗಲು ಬಯಸಿದ್ದರೆ ಅದು ಇದೀಗ ಇನ್ನಷ್ಟು ಸುಲಭವಾಗಲಿದೆ….ಹೌದು ಗೋವಾದ ಬೀಚ್ ಗಳಲ್ಲಿ ಆಯೋಜಿಸುವ ಬೀಚ್ ವೆಡ್ಡಿಂಗ್ (ಮದುವೆ ಸಮಾರಂಭ)ಕ್ಕಾಗಿ ಆಯೋಜನಕರು ಇನ್ನು ಮುಂದೆ ಪದೆ ಪದೆ ಪರವಾನಗಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆಯೋಜಕರು ಮೂರು ವರ್ಷಕ್ಕೆ 40 ಬೀಚ್ ವೆಡ್ಡಿಂಗ್ ಆಯೋಜಿಸಲು ಒಂದೇ ರಖಂ ಶುಲ್ಕ ನೀಡುವ ಪ್ರಸ್ತಾವವನ್ನು ಗೋವಾ ಕಿನಾರಿ ಕ್ಷೇತ್ರ ವ್ಯವಸ್ಥಾಪನ ಪ್ರಾಧಿಕಾರ ಮುಂದಿಟ್ಟಿದೆ.
ಆಯೋಜರು 3 ವರ್ಷಗಳಲ್ಲಿ 40 ಮದುವೆ ಸಮಾರಂಭ ಆಯೋಜನೆಗೆ 7 ಲಕ್ಷ ರೂ ಭರಿಸಿ ಪರವಾನಗಿ ತೆಗೆದುಕೊಳ್ಳಬೇಕಾಗಲಿದೆ. ಇಷ್ಟೇ ಅಲ್ಲದೆಯೇ ಕಿನಾರಿ ಭಾಗದ ಹೋಟೆಲ್ ಗಳಲ್ಲಿ ಆಯೋಜಿಸುವ ಸಮಾರಂಭಗಳ ಶುಲ್ಕವನ್ನೂ ಕಡಿತಗೊಳಿಸಲು ಮುಂದಾಗಿದ್ದು, ಮುಂದಿನ ಬೈಠಕ್ ನಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೋವಾದ ಬೀಚ್ ಗಳಲ್ಲಿ (Goa Beach Wedding) ಒಂದು ವಿವಾಹ ಸಮಾರಂಭ ಆಯೋಜಿಸಲು ಸಮಾರಂಭದ 7 ದಿನ ಮುಂಚೆ ಅರ್ಜಿ ಸಲ್ಲಿಸಿದರೆ 50 ಸಾವಿರ ಶುಲ್ಕ, ಮೂರ ರಿಂದ 7 ದಿನಗಳ ಮುಂಚೆ ಅರ್ಜಿ ಸಲ್ಲಿಸಿದರೆ 60 ಸಾವಿರ ಶುಲ್ಕ ಭರಿಸಬೇಕಾಗಲಿದೆ.
ಇದೀಗ ಹೊಸದಾಗಿ ಪ್ರಸ್ತಾಪಿತ ರಿಯಾಯತಿ ಅಡಿಯಲ್ಲಿ ಪ್ರತಿ ವಿವಾಹ ಸಮಾರಂಭಕ್ಕೆ ಆಯೋಜಕರು ಪರವಾನಗಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆಯೋಜಕರು ಮೂರು ವರ್ಷಗಳಲ್ಲಿ 40 ಮದುವೆ ಸಮಾರಂಭ ಆಯೋಜಿಸಲು ಒಂದೇ ರಖಂ ಮೂಲಕ 7 ಲಕ್ಷ ರೂ ಭರಿಸಿದರೆ ಸಾಕು.