Banner Ad

ಸುದ್ದಿ ಕನ್ನಡ ವಾರ್ತೆ

ಬೈಲಹೊಂಗಲ : ಸಮೀಪದ ಮುರಗೋಡ ಗ್ರಾಮದ ಮುಖ್ಯ ರಸ್ತೆಯ ಹತ್ತಿರ ಬಯಗ್ಯಾಸ್ ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸುಟ್ಟು ಹೋದ ಘಟನೆ ಗುರುವಾರ ನಡೆದಿದೆ.

Banner Ad

ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಕಾರ್ಖಾನೆಯಿಂದ ಬಯೋ ಗ್ಯಾಸ್ ತುಂಬಿಕೊಂಡು ಯರಗಟ್ಟಿ ಕಡೆಗೆ ಸಾಗುತ್ತಿತ್ತು. ಮುರಗೋಡ-ಬೈಲಹೊಂಗಲ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕಿತ್ತೂರಿನ ಪ್ರಕಾಶ ಲಂಗೋಟಿ ಎಂಬುವವರಿಗೆ ಸೇರಿದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿ. ಸುಮಾರು ರೂ. 10ಲಕ್ಷ ಹಾನಿಯಾಗಿದೆ.

ಬೈಲಹೊಂಗಲ ಅಗ್ನಿ ಶಾಮಕ ಉಪ ಠಾಣಾಧಿಕಾರಿ ಶಿವಾನಂದ ವಾಲಿಶೆಟ್ಟಿ, ಸಿಬ್ಬಂದಿಗಳಾದ ರಮೇಶ ತಪರಿ, ಕಲ್ಲಪ್ಪ ಹುಚ್ಚನ್ನವರ, ರಾಹುಲ ಹೋಮಕರ, ಶಿವಪ್ಪ ಅಂಬಿಗಿ, ಸಿಬ್ಬಂದಿಗಳು ಸತತ ಮೂರು ಗಂಟೆಗಳ ಕಾಲ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Banner Ad