ಸುದ್ದಿಕನ್ನಡ ವಾರ್ತೆ
Goa Metro: ಗೋವಾದಲ್ಲಿ ಮೆಟ್ರೊ ರೈಲು ಯೋಜನೆಯ ಕುರಿತು ಚರ್ಚೆ ನಡೆಯುತ್ತಿದೆ. ಗೋವಾ ರಾಜ್ಯ ಸರ್ಕಾರವು ಈ ಯೋಜನೆಯ ಕುರಿತು ಪ್ರಪೋಸಲ್ ಸಿದ್ಧಪಡಿಸಿದೆ. ಈ ಕುರಿತು ಭಾರತೀಯ ರೈಲ್ವೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗೋವಾದಲ್ಲಿ ಮೆಟ್ರೋ ರೈಲು ಯೋಜನೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾದಲ್ಲಿ ಮೆಟ್ರೋ ರೈಲು ಯೋಜನೆ ಆರಂಭಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಯುವ ದಿನದ ಅಂಗವಾಗಿ ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಯುವಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾದಲ್ಲಿ ಈ ಹಿಂದೆಯೇ ಮೆಟ್ರೋ ಯೋಜನೆಯ ಕರಿತು ಪ್ರಕ್ರಿಯೆ ನಡೆದಿತ್ತು, ಆದರೆ ಕೆಲ ಕಾರಣದಿಂದ ಈ ಯೋಜನೆ ಆರಂಭಗೊಂಡಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.