ಸುದ್ಧಿಕನ್ನಡ ವಾರ್ತೆ
Goa: ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ದೇಶದ ಹಲದೆವೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿದೆ. ಪ್ರಮುಖವಾಗಿ ದೆಹಲಿಯಿಂದ ಹಾರಾಟ ನಡೆಸುವ ವಿಮಾನಗಳ ಸಮಯ ಬದಲಾವಣೆಯಿಂದ ದೇಶದ ಇತರ ಭಾಗಗಳಲ್ಲಿಯೂ ವಿಮಾನ ಹಾರಾಟದಲ್ಲಿ ವ್ಯತ್ಯಯವುಂಟಾಗಿದೆ. ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ 2 ದಿನಗಳಲ್ಲಿ 400 ಕ್ಕೂ ಅಧಿಕ ವಿಮನಗಳು ತಡವಾಗಿ ಹಾರಾಟ ನಡೆಸಿವೆ.

ಈ ಹವಾಮಾನ ವೈಪರಿತ್ಯದ ಪರಿಣಾಮ ವಿಮಾನಗಳ ಹಾರಾಟ ವಿಳಂಬವಾಗಿದ್ದರಿಂದ ಶಾಶ್ವತ್ ಅಗ್ರವಾಲ್ ಎಂಬುವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದೆಯೇ ತೊಂದರೆ ಅನುಭವಿಸುವಂತಾಗಿದೆ.

ಶಾಶ್ವತ್ ಅಗ್ರವಾಲ್ ರವರು ದೆಹಲಿಯಿಂದ ಗೋವಾಕ್ಕೆ ಆಗಮಿಸುವವರಿದ್ದರು. ನಂತರ ಗೋವಾದಿಂದ ಚನ್ನೈಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ದೆಹಲಿಯಲ್ಲಿ ಏರ್ ಇಂಡಿಯಾ ಎಕ್ಸಪ್ರೆಸ್ ಪ್ಲೈಟ್ ಸಮಯ ಬದಲಾವಣೆಯಿಂದ ಅವರಿಗೆ ಚನ್ನೈ ತೆರಳಲು ಕನೆಕ್ಟಿಂಗ್ ಫ್ಲೈಟ್ ತಪ್ಪಿಹೋಯಿತು. ಇದರಿಂದಾಗಿ ಅವರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

 


SuddiKannada News
Goa: Due to inclement weather, there were disruptions in the flight operations of many flights in the country on Sunday. Mainly due to the change in the timing of flights flying from Delhi, there were also disruptions in flight operations in other parts of the country. More than 400 flights have been delayed from Delhi International Airport in the last 2 days.

Due to the delay in flights due to this weather disturbance, Shashwat Agrawal has been facing difficulties as he could not write the exam.

Shashwat Agrawal was coming from Delhi to Goa. Then he was supposed to travel from Goa to Chennai. But due to the change in the timing of the Air India Express flight in Delhi, he missed the connecting flight to Chennai. Due to this, it is said that he could not sit for the exam.