ಸುದ್ದಿ ಕನ್ನಡ
ಜೋಯಿಡಾ ಸೋಸೈಟಿಯಲ್ಲಿ ಪಡಿತರಕ್ಕಾಗಿ ಪರದಾಟ, ರಾತ್ರಿ ಹಗಲೆನ್ನದೆ ಕೆ.ವೈ.ಸಿಗಾಗಿ ಕಾದಾಟ. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ, ಸರ್ಕಾರ ಉಚಿತ ಪಡಿತರ ನೀಡಿದರೂ, ತಿಂಗಳ ಕೊನೆಯಲ್ಲಿ ಕೆ.ವೈಸಿ.ಆಗದೆ ಪಡಿತರ ದಿಂದ ವಂಚಿತರಾಗು ವಂತಾದ ಆವ್ಯವಸ್ಥೆಗೆ ಸಾರ್ವಜನಿಕರು ಹಿಡಿ ಶಾಪಹಾಕುತ್ತಿದ್ದಾರೆ.
ಜೋಯಿಡಾ ಕೇಂದ್ರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಮಸ್ಯೆ ನಿವಾರಣೆಗೆ ಆಯಾ ಗ್ರಾಮದ ಪಡಿತರರಿಗೆ ಚೀಟಿ ವ್ಯವಸ್ಥೆ ಮಾಡಿ ಸರತಿಯ ಸಾಲಿನಲ್ಲಿ ನಿಂತು, ರಾತ್ರಿ ಕಾವಲು ಕಾಯುವ ಪರಿಸ್ಥಿತಿಯನ್ನು ಕೊನೆಗಾಣಿಸಿದ್ದು, ಕೊಂಚ ಸುಧಾರಣೆ ಬಂದಂತಾಗಿತ್ತು. ಆದರೆ ಆಹಾರ ಇಲಾಖೆ ಕೆ.ವೈ.ಸಿ. ಗಾಗಿ ದಿನಗಟ್ಟಲೆ ಕಾದರೂ ಓಟಿಪಿ ಸಿಗದೆ ಪಡಿತರ ದಾರರು ಹೈರಾಣಾಗುತಿದ್ದು. ತಿಂಗಳ ಕೊನೆಯ ದಿನವಾದರೂ ಕೆ.ವೈ.ಸಿ ಆಗದೆ ಪಡಿತರ ಸಿಗದೆ. ಉಚಿತ ಪಡಿತರದಿಂದ ವಂಚನೆಯಾಗುವ ಪರಿಸ್ಥಿತಿ ನಿರ್ಮಾಣ ವಾಗುತ್ತಿರುವ ಇಲಾಖೆಯ ಅವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.
ಜೋಯಿಡಾ ಸೋಸೈಟಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕರಂಬಾಳಿ , ಜೋಯಿಡಾ, ಗಾಂಗೋಡಾ, ಸೇರಿದಂತೆ ಸುತ್ತಲಿನ ಅನೇಕ ಗ್ರಾಮದ ಪಡಿತರ ದಾರರು, ಕೆ.ವೈಸಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ನಾಳೆ ಸೋಮವಾರ ತಿಂಗಳ ಕೊನೆಯ ದಿನ ಬಂದರೂ ಕೆ.ವೈ.ಸಿ.ಆಗದೆ ಪಡಿತರ ಅಕ್ಕಿ ಸಿಗದೆ ತಿಂಗಳ ಪಡಿತರ ದಿಂದ ವಂಚನೆ ಭೀತಿ ಕಾಡುವಂತೆ ಮಾಡಿದೆ.
ದೂರದೂರದ ಹಳ್ಳಿಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ದೈನಂದಿನ ಕೆಲಸ ಕಾರ್ಯಬಿಟ್ಟು ಉಚಿತ ಪಡಿತರಕ್ಕಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ, ಬಂದಿದ್ದು ಇಷ್ಟಾದರೂ ತಿಂಗಳ ಕೊನೆಯಲ್ಲಿ ಪಡಿತರ ಸಿಗದಿದ್ದರೆ ಈ ಉಚಿತ ಪಡಿತರ ಯಾವ ಪುರುಷಾರ್ಥಕ್ಕೆ ಎನ್ನುವಂತಾಗಿದ್ದು, ಆಹಾರ ಇಲಾಖೆ ಈ ಪಡಿತರ ಅವ್ಯವಸ್ಥೆಯ ವಿರುದ್ಧ ಆಹಾರಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ ಎಂದು ಪಡಿತರ ದಾರರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದರೂ ಕಂದಾಯ ಇಲಾಖೆ ಏನೂ ಸುಧಾರಣೆ ಮಾಡುತ್ತಿಲ್ಲ, ರೇಷನ್ ಬರುವ ಮೊದಲೇ ಪಡಿತರ ದಾರರು ತಮ್ಮ ತಮ್ಮ ಓಟಿಪಿ ಪಡೆಯುವಂತೆ ಆಹಾರ ಇಲಾಖೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹಿಂದಿನ ತಿಂಗಳು ಪಡಿತರ ಪಡೆದವರು, ಈ ತಿಂಗಳ ಪಡಿತರ ಸಿಗುತ್ತದೆ ಎಂದು ಕಾಯ್ದು ಪಡಿತರ ಸಿಗದೇ ನಿರಾಸೆ ಯಿಂದ ಬರಿಗೈಲಿ ಹೋಗುತ್ತಿರುವುದು, ಬೇಡುವವರನ್ನು ಕಾಲಿ ಕೈಯಲ್ಲಿ ಕಳಿಸಿದರೆ ಹೇಗೆ ಎಂಬಂತೆ ಕಾಣುತ್ತಿತ್ತು.
