ಸುದ್ದಿ ಕನ್ನಡ
. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ, ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅವುರ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ನಂದಿಗದ್ದೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ದಿನಾಂಕ:23-11-2026 ರ ಸೋಮವಾರಂದು ನಡೆದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯ ವಿದ್ಯಾರ್ಥಿನಿ ಹೇಮಾವತಿ ಮಂಜುನಾಥ ಸಾವರಕರ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ,ಸಹ ಶಿಕ್ಷಕ ವೃಂದದವರು,ಸಮೂಹ ಸಂಪನ್ಮೂಲ ವ್ಯಕ್ತಿಗಳು,ಶಾಲಾ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಕ್ಲಸ್ಟರಿನ ಮುಖ್ಯ ಶಿಕ್ಷಕ,ಸಹ ಶಿಕ್ಷಕ ವೃಂದದವರು,ಪಾಲಕರಾದ ಮಂಜುನಾಥ ಗಣೇಶ ಸಾವರಕರ,ರಂಜನಾ ಮಂಜುನಾಥ ಸಾವರಕರ, ವೇದಾಂತ ಮಂಜುನಾಥ ಸಾವರಕರ,ರತಿ ಗಣೇಶ ಸಾವರಕರ,ಬಾಲಕೃಷ್ಣ ಗಣೇಶ ಸಾವರಕರ,ಸಂಗೀತಾ ಬಾಲಕೃಷ್ಣ ಸಾವರಕರ,ಪ್ರತಿಜ್ಞಾ ಬಾಲಕೃಷ್ಣ ಸಾವರಕರ,ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಸದಸ್ಯರಾದ ಧವಳೋ ಗಣೇಶ ಸಾವರಕರ,ಸಂಧ್ಯಾ ಧವಳೋ ಸಾವರಕರ,ಸಚಿತ್ ಧವಳೋ ಸಾವರಕರ,ಗಣೇಶ ಪರಮೇಶ್ವರ ವೇಳಿಪ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈಕೆಯು ಕಳೆದ ವರ್ಷದ ಪ್ರತಿಭಾ ಕಾರಂಜಿಯ ಚಿತ್ರಕಲಾ ಸ್ಪರ್ಧೆಯಲ್ಲಿ ಕ್ಲಸ್ಟರ್,ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು,ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾಳೆ.
