ಸುದ್ದಿ ಕನ್ನಡ ವಾರ್ತೆ
ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉತ್ತರ ಕನ್ನಡ ಜಿಲ್ಲಾ ಕಾರವಾರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ DMF ಉತ್ತರ ಕನ್ನಡ ಜಿಲ್ಲೆ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ 10 ದಿನಗಳ ಜೇನು ಕೃಷಿ ತರಬೇತಿ ಸ್ಥಳ- ಪಾಯಿಸವಾಡ ತೀನೈ ಘಾಟ್ ದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಮಂಜುನಾಥ್ ಬಿರ್ಜೆ ತಾಲೂಕ ಪ್ರೋಗ್ರಾಮ್ ಮ್ಯಾನೇಜರ್ ತಾಲೂಕು ಪಂಚಾಯತ್ ಎನ್ ಆರ್ ಎಲ್ ಎಂ ಜೋಯಿಡಾ ಇವರು
ಶಿಬಿರಾರ್ಥಿಗಳಿಗೆ ಜೇನು ಕೃಷಿ ಒಂದು ಒಳ್ಳೆಯ ಉದ್ಯೋಗ ಜೀವನಕ್ಕೆ ಆದಾಯ ಬರುವಂಥ ಚಟುವಟಿಕೆ ಆಗಿರುತ್ತದೆ ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶ್ರೀಯುತ ವಿನಾಯಕ್ ಚವಾನ್ ಯೋಜನಾ ಸಂಯೋಜಕರು ಸಿಬಿಡಿ -ಆರ್ ಸೆಟ್ ಹಳಿಯಾಳ ಶಿಬಿರಾರ್ಥಿಗಳ ಕುರಿತು ಜೇನು ಕೃಷಿ ಈ ಉದ್ಯೋಗದಿಂದ ಉತ್ತಮ ಆದಾಯ ಬರುತ್ತದೆ ಮತ್ತು ಕೃಷಿಯ ಉಪ ಕಸುಬಾಗಿ ಮಾಡಬಹುದು ಅದರ ಲಾಭದಿಂದ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ಮಾತನಾಡಿದರು ಶ್ರೀಯುತ ತುಕಾರಾಂ ಗಾವ್ಕರ್ ಸಾಮಾಜಿಕ ಕಾರ್ಯಕರ್ತ ತಿನೈ ಘಾಟ್ ಇವರು ಸ್ವ-ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸಿದರು ಶ್ರೀಯುತ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಸಿಬಿಡಿ – ಆರ್ ಸೆಟ್ ಸಂಸ್ಥೆ ಜೋಯಿಡಾ ಕಾರ್ಯಕ್ರಮವನ್ನು ನಿರೂಪಿಸಿದರು ಶ್ರೀಯುತ ಮನೋಹರ್ ಚ ವರಿಯವರ್ ಕ್ಷೇತ್ರ ಮೇಲ್ವಿಚಾರಕರು ಆಯೋಜಿಸಿ ವಂದಿಸಿದರು. ಒಟ್ಟು 25 ಶಿಬಿರಾರ್ಥಿಗಳಿಗೆ ಭಾಗವಹಿಸಿದ್ದರು.
