ಸುದ್ದಿ ಕನ್ನಡ ವಾರ್ತೆ
ಗೋಕರ್ಣಕ್ಕೆ ಬಂದಿದ್ದ ನಾಲ್ವರು ಪ್ರವಾಸಿಗರು ಓಂ ಬೀಚ್ ನಲ್ಲಿ ತಂಗಿದ್ದ ಗುಡ್ಲೇ ಬೀಚ್ ರಿಸಲ್ಟ್ ಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಮಾಧ್ಯಮದ್ಯೆ ಚಿರತೆಯೊಂದು ಕಾಣಿಸಿಕೊಂಡು ಪ್ರವಾಸಿಗರು ಭಯಭೀತರಾದ ಘಟನೆ ನಡೆದಿದೆ.

ಭಯಭೀತರಾದ ಈ ಪ್ರವಾಸಿಗರು ತಕ್ಷಣವೇ ಗೋಕರ್ಣ ಪೊಲೀಸ್ ಠಾಣೆಗೆ ಕರೆ ಮಾಡಿ ಸಹಾಯಕ್ಕಾಗಿ ವಿನಂತಿಸಿಕೊಂಡರು. ಈ ಕುರಿತಂತೆ ಕೂಡಲೇ ಸ್ಪಂದಿಸಿದ ಗೋಕರ್ಣ ಪೊಲೀಸ್ ಠಾಣೆಯ ಸಿಎಚ್ಸಿ 851 ರಾಜೇಶ್ ನಾಯಕ್, ಸಿಪಿಸಿ 239 ಪರಮೇಶ್ವರ್ ಬೆಂಡಲಗಟ್ಟಿ, ಹಾಗೂ ಸಿಪಿಸಿ 1837 ಪ್ರಕಾಶ್ ಮಲ್ಲಿ, ರವರು ಠಾಣೆಯ ಸರ್ಕಾರಿ ವಾಹನದಲ್ಲಿ ಸೈರನ್ ಶಬ್ದ ಮಾಡುತ್ತಾ ಘಟನಾ ಸ್ಥಳಕ್ಕೆ ದಾವಿಸಿದರು.

ಚಿರತೆಯನ್ನು ಕಂಡು ಭಯಭೀತರಾಗಿದ್ದ ಈ ಪ್ರವಾಸಿಗರನ್ನು ಸುರಕ್ಷಿತವಾಗಿ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಕೂಡ್ಲೆ ಬೀಚ್ ರೆಸಾರ್ಟ್ ಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿ ಪ್ರವಾಸಿಗರಲ್ಲಿ ಧೈರ್ಯ ತುಂಬಿ ಸುರಕ್ಷಿತವಾಗಿ ರಕ್ಷಿಸಿದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಪ್ರವಾಸಿಗರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.

ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಹಾಗೂ ಮಾನವೀಯ ಕಾಳಜಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಶ್ಲಾಘಿಸಿ ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.