ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಕೂಡ ಯೋಜನೆ ಜಾರಿಗೆ ಸರ್ಕಾರ ವೈಮಾನಿಕ ಸಮೀಕ್ಷೆ ಮುಂದುವರೆದಿದೆ.
ಕಳೆದ ಕೆಲವು ದಿನಗಳಿಂದ ಮಂಚಿಕೇರಿ, ಸೋಂದ ಭಾಗದಲ್ಲಿ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಇಂದು ಗುರುವಾರ ಮಂಚಿಕೇರಿ, ಕುಂದರಗಿ, ಬೆಡಸಗಾಂವ , ಉಲ್ಲಾಳ, ಕೆರೆ ಹೊಸಳ್ಳಿ, ಬೆಂಡಿಗೇರಿ, ಮೈನಹಳ್ಳಿ, ಈ ಭಾಗದಲ್ಲಿ ವಿಮಾನವು ಸುತ್ತು ಹೊಡೆಯುತ್ತಲೇ ಇದೆ. ಇದರಿಂದಾಗಿ ನದಿ ಜೋಡಣೆಯ ವೈಮಾನಿಕ ಸಮೀಕ್ಷೆ ಹಾಗೂ ಸರ್ವೆ ನಡೆಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದಾಗಿ ಜನತೆ ಮತ್ತಷ್ಟು ಆತಂಕ ಕೀಡಾಗಿದ್ದಾರೆ.
ಇತ್ತೀಚಿಗಷ್ಟೇ ಸಂಸದ ಬಸವರಾಜ್ ಬೊಮ್ಮಾಯಿ ರವರು ನದಿ ಜೋಡಣೆ ವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ನದಿ ಜೋಡಣೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವೆ ಕಾರ್ಯವನ್ನು ವೈಭಾನಿಕವಾಗಿ ಅಥವಾ ಡ್ರೋನ್ ಮೂಲಕ ಮೇಲಿಂದಲೇ ನಡೆಸುವಂತೆ ಸೂಚನೆ ನೀಡಿದ್ದರು. ಇದರಿಂದಾಗಿ ಅವರ ಹೇಳಿಕೆಯಂತೆ ಇದೀಗ ಈ ಭಾಗದಲ್ಲಿ ವೈಮಾನಿಕವಾಗಿ ಸಮೀಕ್ಷೆ ನಡೆಸಿ ಸರ್ವೆ ಕೂಡ ಮಾಡಲಾಗುತ್ತಿರಬಹುದು ಎಂಬ ಆತಂಕ ವ್ಯರ್ಥವಾಗುತ್ತಿದೆ.
ಯೋಜನೆ ಜಾರಿಗೆ ಪಟ್ಟು ಹಿಡಿದು ಕುಳಿತಂತಿರುವ ಸಂಸದ ಬಸವರಾಜ್ ಬೊಮ್ಮಾಯಿ ದಿನವೊಂದರಂತೆ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ನದಿ ಜೋಡಣೆ ಯೋಜನೆಯನ್ನು ತಗಿತಗೊಳಿಸಲು ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ 15 ದಿನಗಳ ಕಾಲ ಗಳು ನೀಡಲಾಗಿದ್ದು ಯೋಜನೆಯ ಜಾರಿಗೆ ಇರುವ ಭಾರಿ ಒತ್ತಡವನ್ನು ಮೀರಿ ಈ ಯೋಜನೆಯನ್ನು ರದ್ದುಗೊಳಿಸಲು ಯಾವ ರೀತಿ ತಮ್ಮ ಹೆಜ್ಜೆ ಇಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ನೀಡಿದ ಗಡುವಿನಲ್ಲಿ ಎರಡು ದಿನ ಲೆಸ್…
ಉತ್ತರ ಕನ್ನಡ ಜನತೆ ಕೂಡ ಈ ಯೋಜನೆ ಸ್ಥಗಿತಗೊಳಿಸಲು ನಮ್ಮ ಜಿಲ್ಲೆಯ ಶಾಸಕರು ಮತ್ತು ಸಂಸದರು ಏನು ಮಾಡಲಿದ್ದಾರೆ… ನೀಡಿರುವ ಗಡುವಿನಲ್ಲಿ ಈಗಾಗಲೇ ಎರಡು ದಿನ ಕಳೆದೆ ಹೋಯಿತು… ಇನ್ನು 13 ದಿನ ಮಾತ್ರ ಬಾಕಿ ಉಳಿದಿದೆ… ಇಷ್ಟರಲ್ಲಿ ಇವರು ಈ ಯೋಜನೆಗೆ ಬ್ರೇಕ್ ಹಾಕಲು ಯಾವ ರೀತಿ ಸಿದ್ಧತೆ ನಡೆಸಿದ್ದಾರೆ ಎಂಬುದರತ್ತ ಗಮನಹರಿಸಿದ್ದಾರೆ.
