ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಹಸೀಲ್ದಾರ್ ಆಗಿದ್ದ ಮಂಜುನಾಥ್ ಮುನ್ನೊಳ್ಳಿ ಅವರಿಗೆ ಸಹಾಯಕ ಕಮಿಷನರ್ ಆಗಿ ಬಡ್ತಿ ದೊರಕಿತ್ತು, ಹಾಗಾಗಿ ಅವರು ಮಂಗಳವಾರ ಜೋಯಿಡಾ ದಿಂದ ಬಿಡುಗಡೆ ಗೊಂಡಿದ್ದಾರೆ.

 

ಅವರ ಸ್ಥಾನಕ್ಕೆ ಪ್ರಭಾರಿ ಯಾಗಿ ಸದ್ಯ ದಾಂಡೇಲಿ ಯ ತಹಸೀಲ್ದಾರ ಶೈಲೇಶ್ ಪರಮಾನಂದ ಅವರನ್ನು ನಿಯುಕ್ತಿ ಮಾಡಲಾಗಿದೆ.ಮಂಜುನಾಥ್ ಮುನ್ನೊಳ್ಳಿ ಅವರನ್ನು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗಾಯಿಸಲಾಗಿದೆ.ಶೈಲೇಶ್ ಪರಮಾನಂದ ಅವರು ಈ ಹಿಂದೆ ಎರಡು ಬಾರಿ ಜೋಯಿಡಾ ದ ಪ್ರಭಾರಿ ತಹಸೀಲ್ದಾರ್ ಆಗಿ ಕೆಲಸ ಮಾಡಿದ್ದಾರೆ.ಜೋಯಿಡಾ ತಾಲೂಕು ವಿಸ್ತಾರದಲ್ಲಿ ತುಂಬಾ ದೊಡ್ಡದು ದಾಂಡೇಲಿ ತಾಲೂಕಿನ ಹತ್ತು ಪಟ್ಟು ದೊಡ್ಡದಿದೆ,

ಈ ತಾಲೂಕಿಗೆ ಪ್ರಭಾರಿ ಗಳನ್ನು ಯಾವುದೇ ಇಲಾಖೆ ಗೆ ನೇಮಕ ಮಾಡಿದರೂ ಅವರಿಗೆ, ಜನರ ಸಮಸ್ಯೆಗೆ ಸ್ಪಂದಿಸಲು ತುಂಬಾ ಕಷ್ಟ ವಾಗುತ್ತದೆ, ಹಾಗಾಗಿ ಬೇಗನೇ ಜೋಯಿಡಾ ತಾಲೂಕಿಗೆ ಪೂರ್ಣಅವದಿಯ ತಹಸೀಲ್ದಾರ್ ರನ್ನು ಸರಕಾರ ನೇಮಕ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.