ಸುದ್ದಿ ಕನ್ನಡ ವಾರ್ತೆ
ಗೋವಾ ಬೆಳಗಾವಿ ಹೆದ್ದಾರಿ ಅನಮೋಡ್ ಘಾಟ್ ನಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಈ ಅಪಘಾತದ ಭೀಕರತೆ ಎಷ್ಟಿತೆಂದರೆ ಅಪಘಾತದಲ್ಲಿ ಗ್ರ್ಯಾಂಡ್ ವಿಟಾರಾ ಕಾರು ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಕಾರು ಗೋವಾದಿಂದ ಕರ್ನಾಟಕ ಮಾರ್ಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಕಾರು ಬೆಂಕಿಗೆ ದಗ ದಗ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಪ್ರಯಾಣಿಕರು ಕಂಗಾಲಾಗಿದ್ದಾರೆ.
