ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ಶಿಕ್ಷಣ ಪ್ರಸಾರಕ ಸಮಿತಿಯ ಮತ್ತು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಅಘನಾಶಿನಿ ಯುವ ಜಾಗೃತಿ ಸಮಾವೇಶ ಸಿದ್ದಾಪುರದ ಎಂ ಜಿ ಸಿ ಕಲಾ ವಾಣಿಜ್ಯ ಹಾಗೂ ಬಿ ಎಚ್ ಡಿ ವಿಜ್ಞಾನ ವಿದ್ಯಾಲಯ ನಡೆಯಿತು. ಡಾ. ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅನಂತ ಹೆಗಡೆ ಅಶೀಸರ ಕಾರ್ಯಕ್ರಮ ಉದ್ಘಾಟಿಸಿದರು. ಅಶ್ವಿನ್ ಕುಮಾರ್ ಭಟ್ ಗಾಳಿ ಮನೆ ಅಘನಾಶಿನಿ ಸಾಕ್ಷ ಚಿತ್ರದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಡಾ. ಪ್ರಕಾಶ್ ಮೇಸ್ತ ಹೊನ್ನಾವರ ಅಘನಾಶಿನಿ ಅಳಿವೆಯ ವೈವಿಧ್ಯತೆಯ ಕುರಿತು ಮಾಹಿತಿ ನೀಡಿದರು.
ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ನದಿ ಕಣಿವೆಗಳ ಸಂರಕ್ಷಣೆ ಕುರಿತು ಡಾ. ಬಾಲಚಂದ್ರ ಹೆಗಡೆ ಸಾಯಿ ಮನೆ ಮಾತನಾಡಿದರು. ಟಿಎಂಎಸ್ ಸಿದ್ದಾಪುರದ ಅಧ್ಯಕ್ಷರಾದ ಆರ್ ಎಂ ಹೆಗಡೆ ಬಾಳೆಸರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವನಾಥ್ ಶೀಗೆಹಳ್ಳಿ ಪತ್ರ ಚಳುವಳಿಯ ಮಹತ್ವ ತಿಳಿಸಿದಾಗ ಉಪಸ್ಥಿತ ವಿದ್ಯಾರ್ಥಿಗಳೆಲ್ಲ ಪತ್ರ ಚಳುವಳಿಯಲ್ಲಿ ಭಾಗಿಯಾದರು.
ಕಾಲೇಜಿನ ಪ್ರಾಚಾರ್ಯರಾದ ಜಗನ್ನಾಥ ಮೊಗೇರ್ ಉಪಸ್ಥಿತರಿದ್ದ ಈ ಕಾರ್ಯಕ್ರಮವು ಗೋಪಾಲಕೃಷ್ಣ ತಂಗಾರಮನೆ ಮತ್ತು ಮಹೇಶ್ ಮುಕ್ರಮನೆ ಸಂಯೋಜನೆಯಲ್ಲಿ ಯಶಸ್ವಿಯಾಗಿ ಮೂಡಿಬಂತು.
