ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ಕನ್ನಡಿಗರನ್ನೇ ಟಾರ್ಗೆಟ್ ಮಾಡಿಕೊಂಡು ಕನ್ನಡಿಗರ ಕೆಲಸ ಕಿತ್ತುಕೊಳ್ಳುವ ಹಾಗೂ ಉದ್ಯೋಗ ಕಸಿದುಕೊಳ್ಳುವ ಘಟನೆಗಳು ಹೆಚ್ಚುತ್ತಲೇ ಇದೆ. ಅದರಲ್ಲಿ ಬಹು ಮುಖ್ಯವಾಗಿ ಕನ್ನಡಿಗರು ನಡೆಸುತ್ತಿರುವ ಟ್ರಕ್ ಉದ್ಯೋಗವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.
ಗೋವಾದ ಸಾವರ್ಡೆಯ ಪೊಮೆಂತೋ ಕಂಪನಿಯ ಸಾವರ್ಡೆ ಟ್ರಕ್ ಸಂಘಟನೆ ಇದೀಗ ಮತ್ತೊಂದು ಖ್ಯಾತೆ ಎತ್ತಿದೆ. ಕಮೆಂತೋ ಕಂಪನಿಗೆ ಹೊರರಾಜ್ಯದ ಟ್ರಕ್ ನಡೆಸಲು ಅವಕಾಶ ನೀಡಿರುವುದರ ನಿಷೇಧಾರ್ಥ ಅಲ್ಲಿನ ಟ್ರಕ್ ಮಾಲೀಕರು ಅಧಿರು ಟ್ರಕ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಘಟನೆ. ಹೊರ ರಾಜ್ಯದ ಟ್ರಕ್ ಗಳಿಗೆ ನಿರ್ಬಂಧ ಹೇರದ ಹೊರೆತು ಅಧಿರು ಸಾಗಾಟ ಆರಂಭಿಸಲು ಬಿಡುವುದಿಲ್ಲ ಎಂದು ಈ ಟ್ರಕ್ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕೆಫೆ ಪೊಲೀಸ್ ಉಪ ಅಧೀಕ್ಷಕ ನೀಲೇಶ್ ರಾಣಿ, ಪೊಲೀಸ್ ನಿರೀಕ್ಷಕ ಜಿತೇಂದ್ರ ನಾಯಕ್ ಸೇರಿದಂತೆ ಪೊಲೀಸ್ ತಂಡ ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ವಹಿಸಿತ್ತು.
ಹೊರರಾಜ್ಯದ ಟ್ರಕ್ ಅನ್ನು ಇಲ್ಲಿ ಕೆಲಸಕ್ಕೆ ತೆಗೆದುಕೊಂಡಿರುವುದರಿಂದ ಸ್ಥಳಗಳಿಗೆ ಮೂರು ದಿವಸಕ್ಕೆ ಒಂದೇ ಪಾಳಿ ಬರುತ್ತದೆ ಎಂದು ಸ್ಥಳೀಯ ಟ್ರಕ್ ಸಂಘಟನೆ ಆರೋಪಿಸಿದೆ. ಹೊರ ರಾಜ್ಯದ ಟ್ರಕ್ ಗಳನ್ನು ಕೈ ಬಿಡದ ಹೊರೆತು ಅದಿರು ಸಾಗಾಣೆ ನಡೆಸಲು ಬಿಡುವುದಿಲ್ಲ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಗೋವಾದಲ್ಲಿ ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಂಡ ಅದೆಷ್ಟೋ ಕುಟುಂಬಗಳು ಇದೇ ಟ್ರಕ್ ಉದ್ಯೋಗವನ್ನೇ ಅವಲಂಬಿಸಿವೆ. ಆದರೆ ಇದೀಗ ಗೋವಾದಲ್ಲಿ ಇಂತಹ ಘಟನೆ ಮರುಕಳಿಸುತ್ತಿರುವುದರಿಂದ ಗೋವಾದಲ್ಲಿರುವ ಕನ್ನಡಿಗ ಟ್ರಕ್ ಮಾಲೀಕರು ಹಾಗೂ ಚಾಲಕರಿಗೂ ತೊಂದರೆ ಉಂಟಾಗುವ ಆತಂಕ ಎದುರಾಗಿದೆ.
