ಸುದ್ದಿ ಕನ್ನಡ ವಾರ್ತೆ

ಜೋಯಿಡಾದ ಪಣಸೋಲಿ ಆನೆ ಶಿಬಿರದಲ್ಲಿ ಆನೆಗಳ ಕಲ್ಯಾಣ, ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ಬೇಕು.

ಪಶ್ಚಿಮ ಘಟ್ಟಗಳ ಅರಣ್ಯ ಪರಿಸರದಲ್ಲಿರುವ ಈ ಶಿಬಿರವು ಪ್ರಕೃತಿ ಪ್ರವಾಸೋದ್ಯಮದ ಆಕರ್ಷಣೆಯಾಗಿದ್ದು, ಆನೆಗಳ ಆರೈಕೆ ಮತ್ತು ಅವುಗಳ ಸಹಜ ವರ್ತನೆಗೆ ಪೂರಕವಾದ ನಿರ್ವಹಣೆ ಮುಖ್ಯವಾಗಿದೆ. ಆನೆಗಳಿಗೆ ಸಮರ್ಪಕ ಆಹಾರ, ನೀರು, ವಿಶ್ರಾಂತಿ ಹಾಗೂ ವೈದ್ಯಕೀಯ ಆರೈಕೆ ಒದಗಿಸುವುದರ ಜೊತೆಗೆ ಮಾವುತರು ಮತ್ತು ಅರಣ್ಯ ಸಿಬ್ಬಂದಿಯ ಮೇಲ್ವಿಚಾರಣೆಯನ್ನು ಬಲಪಡಿಸಬೇಕಿದೆ.

Banner Ad

ರಾಜ್ಯದ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆನೆಗಳನ್ನು ಮುಟ್ಟುವುದು, ಆಹಾರ ನೀಡುವುದು ಹಾಗೂ ಅವುಗಳ ಬಳಿ ಅನಗತ್ಯವಾಗಿ ತೆರಳುವುದನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಪ್ರವಾಸಿಗರಿಗೆ ಸುರಕ್ಷತಾ ಸೂಚನೆಗಳನ್ನು ನೀಡುವುದು ಮತ್ತು ನಿಯಮಿತ ಮೇಲ್ವಿಚಾರಣೆ ಖಚಿತಪಡಿಸುವುದೂ ಮುಖ್ಯವಾಗಿದೆ. ಒಂದು ವರ್ಷದ ಹಿಂದೆ ಸಹಾಯಕ ಕಾವಾಡಿಗನೊಬ್ಬನ ಮೇಲೆ ಆನೆ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಸ್ಮರಿಸಬಹುದು. ಇಂತಹ ಘಟನೆ ಮತ್ತೇ ಮರುಕಳಿಸದಂತೆ ಜಾಗೃತೆ ವಹಿಸಬೇಕಿದೆ. ವನ್ಯಜೀವಿ ಇಲಾಖೆ ಅನೇಕ ಸುರಕ್ಷತಾ ಕ್ರಮ, ಪ್ರವಾಸಿಗರಿಗೆ ಮಾರ್ಗಸೂಚಿ ರೂಪಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.

ಇದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ, ಶಬ್ದ ಮಾಲಿನ್ಯ ಮತ್ತು ಅನಿಯಂತ್ರಿತ ಜನಸಂದಣಿಯಿಂದ ಅರಣ್ಯ ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಪರಿಸರ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಪಣಸೋಲಿಯನ್ನು ಜವಾಬ್ದಾರಿಯುತ ಪ್ರವಾಸೋದ್ಯಮದ ತಾಣವಾಗಿ ಬೆಳೆಸಬಹುದು.

ಆನೆಗಳ ಸಂರಕ್ಷಣೆ, ಪ್ರವಾಸಿಗರ ಸುರಕ್ಷತೆ ಮತ್ತು ಅರಣ್ಯದ ರಕ್ಷಣೆ—ಈ ಮೂರು ಅಂಶಗಳಿಗೆ ಸಮಾನ ಆದ್ಯತೆ ನೀಡುವ ಮೂಲಕ ಪಣಸೋಲಿ ಶಿಬಿರದ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಮಾಡುವ ಅಗತ್ಯ ವಿದೆ. ಈ ಪ್ರದೇಶ ದಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯ್ ಕಂಡು ಬರುತ್ತದೆ, ನಿಯಂತ್ರಣ ವಿಲ್ಲ. ಕೊಡಚಾದ್ರಿ ಅರಣ್ಯ ಪ್ರದೇಶ ದಲ್ಲಿ ಗೇಟ್ ಗಳಲ್ಲಿ ವಾಹನ ಬಿಡುವಾಗ ಪ್ಲಾಸ್ಟಿಕ್ ಬ್ಯಾಗ್ ಗಳು ಇದೆಯಾ ಎಂದು ಪರಿಶೀಲಿಸಿಯೇ ಒಳಗೆ ಬಿಡುತ್ತಾರೆ, ಆ ರೀತಿ ತಾಲೂಕಿನಲ್ಲಿನ ಗೇಟ್ ಗಳಲ್ಲಿ ಪರಿಶೀಲಿಸಿ ಪ್ಲಾಸ್ಟಿಕ್ ಇದ್ದರೆ ತೆಗೆಯುಬೇಕು , ನೀರಿನ ಬಾಟಲಿ ಗಳು ಇದ್ದರೆ, ಅದರ ಲೆಕ್ಕ ಹಾಕಿ ವಾಪಸ್ಸು ಬರುವಾಗ ಖಾಲಿ ಬಾಟಲಿ ಲೆಕ್ಕ ಕೊಡಬೇಕು.ಇಂತಹ ಕೆಲಸ ತಾಲೂಕಿನಲ್ಲಿ ಅರಣ್ಯ ಇಲಾಖೆಯವರು ಮಾಡಬೇಕಾಗಿದೆ. ಇದರಿಂದ ಪ್ಲಾಸ್ಟಿಕ್ ನಿಷೇದ ಸಾಧ್ಯ ವಾಗುತ್ತದೆ.