ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಸಪ್ತ ಸ್ವರ ಸೇವಾ ಸಂಸ್ಥೆ ಯವರು ಕಳೆದ 11ವರ್ಷ ಗಳಿಂದ ನಡೆಸುತ್ತಿರುವ ಯಕ್ಷಗಾನ ಸುಪ್ತಾಹ ಯರಮುಖ ದಲ್ಲಿ ನಡೆಯುತ್ತಿದ್ದು, 11ನೇ ವರ್ಷದ ಕಾರ್ಯಕ್ರಮ ದಲ್ಲಿ 4ನೇ ದಿನದ ಕಾರ್ಯಕ್ರಮ ಅತ್ಯಂತ ಸುಂದರ ವಾಗಿ ನಡೆಯಿತು.

 

Banner Ad

ಕಾರ್ಯಕ್ರಮ ದಲ್ಲಿ ನಡೆದ ಗೌರವ ಸನ್ಮಾನ ದಲ್ಲಿ ಕೋಲಾರದ ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ರಾದ ಮಾಧವ ಗಾಂವಕರ ಮತ್ತು ಗುಂದ ಪ್ರೌಢಶಾಲೆ ನಿವೃತ್ತ ಹೆಡ್ ಮಾಸ್ಟರ್ ನಾಗಣ್ಣ ಎಚ್ಚಲಗಾರ್ ಅವರನ್ನು ಸಪ್ತ ಸ್ವರ ಸಂಸ್ಥೆ ಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸರಕಾರಿ ಅಭಿಯೋಜಕರಾದ ಮಾಧವ ಗಾಂವ್ಕರ,ಅವರು ಶ್ರೇಷ್ಠ ರಾದವರು ಸಮಾಜಕ್ಕೆ ಮಾದರಿ ಯಾಗಿರಬೇಕು ಯಾಕೆಂದರೆ ಅನೇಕ ಜನರು ಅವರನ್ನು ಅನುಸರಿಸುತ್ತಾರೆ ಎಂದು ಭಗವದ್ಗೀತೆಯ ಶ್ಲೋಕವನ್ನು ಉಧಾಹರಿಸಿ ಸಮಾಜಮುಖಿ ಕೆಲಸದಲ್ಲಿ ಎಲ್ಲರೂ ಭಾಗವಹಿಸಬೇಕು ಮತ್ತು ಯುವಜನತೆ, ಧುರೀಣರಲ್ಲಿನ ಒಳ್ಳೆಯ ಅಂಶ ಗಳನ್ನು ಮಾತ್ರ ಹಂಸ ಕ್ಷೀರ ನ್ಯಾಯದಂತೆ ಸ್ವೀಕರಿಸಬೇಕು ಎಂದರು.

ಸನ್ಮಾನಿತರಾದ ನಿವೃತ್ತ ಶಿಕ್ಷಕ ರಾದ ನಾಗಣ್ಣ ಯಚ್ಚಲಗಾರ್ ಅವರು ತಮ್ಮ ಸೇವಾ ಅವಧಿ ಯಲ್ಲಿ ನಂದಿಗದ್ದೆಯಲ್ಲಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿನ ಘಟನೆ ಗಳನ್ನು ನೆನೆದು ಗುಂದ ದ ಜನರ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿ ಎಂದು ಭಾವುಕರಾಗಿ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮ ವನ್ನು ಕೊಳಲು ವಾದಕ ಕಲಾವಿದ ಕೃಷ್ಣ ಭಟ್ ಉದ್ಘಾಟನೆ ಮಾಡುವ ಮೂಲಕ ಶುಭ ಹಾರೈಸಿದರು. ಸನ್ಮಾನಿತ ನಾಟಿವೈದ್ಯ ಸೋಮಣ್ಣ ಕೇರಕಾರ ಮಾತನಾಡಿ ತಮಗೆ ವೈದ್ಯಕೀಯ ಹೇಗೆ ಬಂದಿತು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಕೃಷಿ ಪ್ರಶಸ್ತಿ ವಿಜೇತೆ ಇಂದುಮತಿ ದೇಸಾಯಿ ವಹಿಸಿ ಸಂಘಟನೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶ್ರೀನಾಥ್ ದೇಸಾಯಿ, ಸುಬ್ರಾಯ ಭಾಗ್ವತ, ಅಧ್ಯಕ್ಷೆ ಸುಮಂಗಲಾ ದೇಸಾಯಿ ಇತರರು ಉಪಸ್ಥಿತರಿದ್ದರು. ಶ್ರೀಮತಿ ಪದ್ಮಶ್ರೀ ಪ್ರಸನ್ನ ಭಟ್ ರವರು ಉತ್ತಮ ನಿರ್ವಹಣೆ ಮಾಡಿದರು ಸಪ್ತ ಸ್ವರ ಸೇವಾ ಸಂಸ್ಥೆಯ ಕಾರ್ಯ ಕರ್ತರು ಸಹಕರಿಸಿದರು.ನಂತರ ಯಕ್ಷಗಾನ ಭಾಗವತ ರಾದ ಆನಂದ ಆಗೇರ ಅಂಕೋಲಾ ಸಂಗಡಿಗರಿಂದ ದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.