ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ನಂದಿಗದ್ದೆ ಬಯಲು ರಂಗ ಮಂದಿರದಲ್ಲಿ ಆರೋಗ್ಯ ಭಾರತಿ ಗುಂದ ಮತ್ತು ಏಕಲ್ ಅಭಿಯಾನ ದಾಂಡೇಲಿ ಇವರ ಸಹ ಯೋಗದಲ್ಲಿ ಉಚಿತ ಆರೋಗ್ಯ ತಪಾಸಾಣೆ ಮತ್ತುಪಾರಂಪರಿಕ ಮದ್ದು ವಿತರಿಸುವ ಕಾರ್ಯ ಶನಿವಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದ ಪಾರಂಪರಿಕ ವೈದ್ಯ ಮಹಾಬಲೇಶ್ವರ ಬಾಗ್ವತ ಭಟ್ರ್ ಮನೆ ಇವರು ಮಾತನಾಡಿ, ಇಂತಹ ಕಾರ್ಯಕ್ರಮ ಗಳಿಂದ ಹಳ್ಳಿಯ ಜನತೆಗೆ ತುಂಬಾ ಉಪಯುಕ್ತ, ದೂರದ ಊರಿನ ಆಸ್ಪತ್ರೆ ಗಳಿಗೆ ಹೋಗಿ ಬವಣೆ ಅನುಭವಿಸುವುದಕ್ಕಿಂತ ಇಲ್ಲಿಯೇ ಆರೋಗ್ಯ ಬಾಗ್ಯ ಪಡೆಯಲು ಸಾಧ್ಯ ಎಂದರು. ಆರೋಗ್ಯ ಭಾರತಿಯ ಜಿಲ್ಲಾ ಅಧ್ಯಕ್ಷ ಸುರೇಶ ಹೆಗಡೆ ಸಂಸ್ಥೆಯ ಕಾರ್ಯ ಚಟುವಟಿಕೆ ಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮ ದ ಕುರಿತು ದಾಂಡೇಲಿ ಏಕಲದ ಸುಧಾಕರ ಶೆಟ್ಟಿ, ಮುರಳೀಧರ್ ಗೋಸಾವಿ, ಡಾ,, ಸಂಗಮೇಶ್,, ಡಾ, ವೈಶಾಲಿ, ನಾಟಿವೈದ್ಯ ಶ್ರೀಶೈಲ ಭಟ್, ಇತರರು ಮಾತನಾಡಿದರು. ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದ ಶ್ರೀಧರ ದೇಸಾಯಿ. ಪಾರಂಪರಿಕ ವೈದ್ಯರು ಮಾತನಾಡಿ, ಈ ವೈದ್ಯಕೀಯದಲ್ಲಿ ಹಲವು ವಿಧಗಳು ಇದ್ಫು ಎಲ್ಲ ವನ್ನೂ ನಿಷ್ಠೆಯಿಂದ ಪಾಲಿಸಬೇಕು, ಕ್ರಮ ನಿಧಾನವಾಗಿ ಆದರೂ ಪರಿಣಾಮ ಕಾರಿಯಾಗಿರುತ್ತದೆ, ಎಂದು ಹಲವಾರು ಉಧಾಹರಣೆ ಗಳೊಂದಿಗೆ ಉಪಯುಕ್ತ ಮಾಹಿತಿ ನೀಡಿದರು.
ವೇದಿಕೆಯಲ್ಲಿ, ಜನಾರ್ಧನಹೆಗಡೆ, ಸುದರ್ಶನ್ ಬಾಗವತ, ರೇಖಾ ಉಪಾದ್ಯೆ, ನಾಗೇಶ್ ಶಿರಸಿ, ಸುಬ್ರಮಣ್ಯ ಭಾಗವತ, ಸುಬ್ರಾಯ ದಾನಗೇರಿ. ಇತರರು ಉಪಸ್ಥಿತರಿದ್ದರು.
ಕಬ್ಭಿನಗದ್ದೆಯ ಜಿ ಆರ್ ಭಟ್ ಅವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಕ್ರಮ ದ ಯಶಸ್ವಿಗೆ, ಶ್ರೀಮತಿ, ಸೀತಾ ದಾನಗೇರಿ, ಶ್ರೀಮತಿ ಪದ್ಮಶ್ರೀ ಭಟ್, ಶ್ರೀಮತಿ ರಾಧಾ ಹೆಗಡೆ ಶ್ರೀಮತಿ ಮಂಗಲಾ ಉಪಾಧ್ಯ, ಶ್ರೀಮತಿ ಅರ್ಚನಾ ಹೆಗಡೆ ಇತರರು ಸಹಕರಿಸಿದರು. ನೂರಾರು ಜನರು ಕಾರ್ಯಕ್ರಮ ದ ಸದುಪಯೋಗ ಪಡೆದರು.
