ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ನಾದ ವರ್ಷಿಣಿ ಟ್ರಸ್ಟ್ ಮೊರಡಾ ಇವರು ತಮ್ಮ ಟ್ರಸ್ಟ್ ನ ಮೂರನೇ ವರ್ಷದ ವರ್ಷಾಚರಣೆ ಯನ್ನು ದಸರಾ ಹಬ್ಬದ ಸಂಭ್ರಮ ದಲ್ಲಿ ಊರಿನ ಜನತೆಯೊಂದಿಗೆ ಹಂಚಿಕೊಂಡು ವಿವಿಧ ಕಾರ್ಯಕ್ರಮ ಗಳನ್ನು ನಡೆಸಿ ಸಂಭ್ರಮಿಸಿದರು.
ನಂದಿಗದ್ದೆ ಬಯಲು ರಂಗ ಮಂದಿರದಲ್ಲಿ ದಿನಾಂಕ 20 ಮತ್ತು 21ರಂದು ಎರಡು ದಿನಗಳ ಕಾಲ ಶರತ್ ಸಂಭ್ರಮ *3* ರ ಸಂಗೀತ, ಉಪನ್ಯಾಸ, ತಾಳಮದ್ದಳೆ ಗಳು ಜನರನ್ನು ರಂಜಿಸಿದವು. ಮೊದಲನೇ ದಿನ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಆರ್ ವಿ ದಾನಗೇರಿ, ದಾಮೋಧರ ಭಾಗ್ವತ, ರಾಮಕೃಷ್ಣ ಹೆಗಡೆ, ಕಲಾವಿದ ದಯಾನಂದ ದಾನಗೇರಿ ಇದ್ದು ಸಂಸ್ಥೆಗೆ ಶುಭ ಹಾರೈಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮ ದಲ್ಲಿ ಗೀತಾ ರಾಘವೇಂದ್ರ, ದಾನಗೇರಿ ಅವರ ಗಾಯನ, ಪ್ರದೀಪ್ ಕೋಟೆಮನೆ ತಬಲಾ, ಸುಧಾಮ ದಾನಗೇರಿ ಅವರು ಹಾರ್ಮೋನಿಯಂ ದಲ್ಲಿ ಸಾತ್ ನೀಡಿದರು.
ನಂತರ ನಡೆದ ವೀರಮಣಿ ಕಾಳಗ ಭೈಠಕ್ ದಲ್ಲಿ ಶಶಾಂಕ್ ಬೋಡೆ, ನಾಗಪ್ಪ ಕೋಮಾರ ಮತ್ತು ಸಂಜಯ ಕೋಮಾರ ಹಿಮ್ಮೇಳದಲ್ಲಿದ್ದು, ರಾಮಕೃಷ್ಣ ಗದ್ದೆ ನಿರ್ದೇಶನ ನೀಡಿದ ಈ ಬೈಠಕ್ ಮುಮ್ಮೇಳದಲ್ಲಿ, ಸರೋಜಿನಿ ಹೆಗಡೆ, ಪದ್ಮಶ್ರೀ ಭಟ್, ಶಾಂತಿ ಭಟ್, ವೇದಾ ಗಾಂವಕರ, ವನಿತಾ ಭಟ್, ಕುಮಾರಿ ಶರಣ್ಯಾ, ಕುಮಾರ ಕೃತಾಗಮ, ನಿಶ್ಚಿತ ಭಟ್, ಕುಮಾರಿ ಮಹತಿ ಭಟ್ ಇತರರು ಭಾಗವಹಿಸಿ ರಂಜಿಸಿದರು. ಎರಡನೇ ದಿನದ ಕಾರ್ಯಕ್ರಮ ದಲ್ಲಿ ಎಸ್ ಎಸ್ ಭಟ್,ಚಿಂಚ ಖಂಡ ಗೋಪಾಲ ಭಟ್,ಶಿವಪುರ ವಿಘ್ನೇಶ್ವರ ಭಟ್ ಬಾಗಿನಕಟ್ಟಾ,ಅನಂತ ಹೆಗಡೆ ಮತ್ತು ಜಾನ್ನಕಿ ಭಾಗ್ವತ್ ಇವರು ಗಳು ದೀಪ ಬೆಳಗಿಸಿ ಶುಭಹಾರೈಸಿದರು. ನಂತರ ಅoತರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಯಲ್ಲಾಪುರದ ಋಷಿ ಕುಲಂ ದ ವಿಘ್ನೇಶ್ವರ ಭಟ್ ರಿಂದ ಧರ್ಮ ಜಾಗೃತಿ ಗಾಗಿ ಸಂಗೀತ ದೀಪ, ಉಪನ್ಯಾಸ, ನಡೆಯಿತು. ನಂತರ ಶಾರ್ವರಿ ಯಕ್ಷಗಾನ ಕೂಟ ಇವರಿಂದ ಭೈಠಕ್ ವಧು ಮಾಲತಿ ಯಕ್ಷಗಾನ ದ ಹಿಮ್ಮೇಳ ದಲ್ಲಿ ದಿನೇಶ ಭಟ್, ನರಶಿಂಹ ಭಟ್, ಪ್ರಮೋದ್ ಹೆಗಡೆ ಸಾಥ್ ನೀಡಿದರೆ, ನರಶಿಂಹ ಭಟ್ ಕುಂಕಿ ನಿರ್ದೇಶಿಸಿದ್ದರು. ಮುಮ್ಮೇಳದಲ್ಲಿ ಶೈಲಾ ಉಪಾಧ್ಯ, ಸಂಧ್ಯಾ ದಾನಗೇರಿ, ಮಂಗಲಾ ಉಪಾಧ್ಯ, ಸುಮಿತ್ರಾ ದಾನಗೇರಿ, ಸುಜಾತಾ ದಾನಗೇರಿ ಮತ್ತು ಸುಕನ್ಯಾ ದೇಸಾಯಿ, ಜನರನ್ನು ಮಾತುಗಾರಿಕೆಯಲ್ಲಿ ರಂಜಿಸಿದರು.
ಎರಡು ದಿನಗಳ ಕಾರ್ಯಕ್ರಮ ವನ್ನು ಪದ್ಮಶ್ರೀ ಭಟ್ ಉತ್ತಮವಾಗಿ ನಡೆಸಿಕೊಟ್ಟರು, ನಾಧ ವರ್ಷಿಣಿ ಸಂಸ್ಥೆಯ ಅಧ್ಯಕ್ಷ ಸುಧಾಮ ಸುಬ್ರಾಯ ದಾನಗೇರಿ ಅವರು ಅತ್ಯುತ್ತಮ ಸಂಗೀತ ಕಲಾವಿದರು, ಅವರು ತಮ್ಮ ಶಿಷ್ಯ ಬಳಗ ದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು
