ಸುದ್ದಿ ಕನ್ನಡ ವಾರ್ತೆ

ಕುಂದಾಪುರದ ಭಂಡಾರ್ಕರ್ ಕಾಲೇಜ್ ನ 1984/87 B. com ಬ್ಯಾಚ್ ನ ಸಹಪಾಠಿಗಳ ಈ ವರ್ಷದ ಪುನರ್ಮಿಲನ ಕಾರ್ಯಕ್ರಮ ಕರ್ನಾಟಕ ದ ಕಾಶ್ಮೀರ ವೆಂದೇ ಪ್ರಖ್ಯಾತಿ ಗಳಿಸಿದ ಕೊಡಗಿನಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 24 ರಿಂದ 26 ರ ವರೆಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಮಡಿಕೇರಿ ಯ ಹೋಮ್ ಸ್ಟೇ ಯಲ್ಲಿ ಎರಡು ದಿನ ವ್ಯಾಸ್ತವ್ಯ.. ಕೊಡಗಿನ ಸುಂದರ ಪ್ರವಾಸಿ ಸ್ಥಳ ಗಳ ವೀಕ್ಷಣೆ… ಸಹಪಾಠಿ ಗಳಿಗಾಗಿ ಏರ್ಪಡಿಸಲಾಗುವ ವಿವಿಧ ಸ್ಪರ್ಧೆಗಳು….. ಸಂಗೀತ ಕಾರ್ಯಕ್ರಮ… ಗಳ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮ ಗಳನ್ನು ಹಮ್ಮಿ ಕೊಳ್ಳಲಾಗಿದೆ.

 

Banner Ad

ಈ ಕಾರ್ಯಕ್ರಮ ಕ್ಕಾಗಿಯೇ ದೂರದ ಅಬುಧಾಬಿ ಯಿಂದ ಬಂದಿರುವ ಆಂಟೋನಿ ರೆಬೆಲ್ಲೊ . . ಕುಂದಾಪುರ ದಿಂದ ಹೊರಡುವ ಸಹಪಾಠಿ ಗಳ ತಂಡದ ನೇತೃತ್ವ ವಹಿಸಿದರೆ. ಬೆಂಗಳೂರಿನಿಂದ ಹೊರಡುವ ಇನ್ನೊಂದು ತಂಡದಲ್ಲಿ ಸಚ್ಚಿದಾನಂದ ಉಡುಪ. ಉಪ್ಪುಂದ ಸತ್ಯನಾರಾಯಣ ಮೈಯ್ಯ… ಸಾಹುಕಾರ ದಿನೇಶ್.. ಮಂಜುನಾಥ್ ಚಾಂದ್ ಮತ್ತು ಶ್ರೀಪತಿ ವೈದ್ಯ ರು ಜೊತೆ ಗೂಡ ಲಿದ್ದಾರೆ.

 

ಈ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರನ್ನೂ ಸಂಪರ್ಕಿಸಿ ಈ ಒಂದು ಪುನರ್ಮಿಲನ ದ ರೂವಾರಿ ಶ್ರೀ ಪ್ರಕಾಶ್ ಶೆಟ್ಟಿ ಅನಿವಾರ್ಯ ಕಾರಣಗಳಿಂದ ದೂರದ ಆಫ್ರಿಕಾದಿಂದ ಬರಲು ಅನಾನುಕೂಲ ವಾಗಿದ್ದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಬಗ್ಗೆ ಬೇಸರ ವ್ಯಕ್ತಪಡಿಸಿ ಮುಂದಿನ ಕಾರ್ಯಕ್ರಮದಲ್ಲಿ ಖಂಡಿತ ಭಾಗವಹಿಸುವ ಭರವಸೆ ನೀಡಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ