ಸುದ್ದಿ ಕನ್ನಡ ವಾರ್ತೆ
ಜೊಯಿಡಾ-ಕುಣಬಿಗಳ ತಲೆತಲಾಂತರದಿಂದ ಸಾಂಪ್ರದಾಯಿಕವಾಗಿ ತಮ್ಮದೇಆದ ಕೊಂಕಣಿ ಭಾಷೆ,ಕಲೆ, ಸಂಸ್ಕೃತಿ,ವೇಷಬೂಷಣ ,ಪರಿಸರದ ಜ್ಞಾನ,ಸಂರಕ್ಷಣೆ,ಜನಪದ ಹಾಡಿನ ಮೂಲಕ ಕಾರ್ಟೋಲಿಯಲ್ಲಿ ನವಮಿ ಹಬ್ಬ ಆಚರಿಸಲಾಯಿತು.
ಹಬ್ಬದ ದಿನ ಇಡಿ ದಿವಸ ಉಪವಾಸ ಮಾಡಿ ಮಿರಾಶಿ ಮೂಲಕ ಕುಲದೇವತೆಗೆ ,ಪೂರ್ವಜರಿಗೆ ಪೂಜಿಸುತ್ತ ಸಾಯಂಕಾಲ ಎಲ್ಲರೂ ಸೇರಿ ತಮ್ಮದೇಆದ ಹಳ್ಳಿಯ ಗಡ್ಡೆ ಗೆಣಸು ಆಹಾರ ಪದಾರ್ಥಗಳ ಊಟ ಮಾಡಿ ಸಾಯಂಕಾಲ ಒಂದಕಡೆ ಸೇರಿ ನಾಲ್ಕು ಗಂಟೆಗಳ ಕಾಲ ಭಜನೆ ಕಾರ್ಯಕ್ರಮ ಮಾಡಲಾಯಿತು. ರಾತ್ರಿ 11 ಗಂಟೆಯಿಂದ 3 ಘಂಟೆ ತನಕ ಜನಪದ ಹಾಡು ಹಾಡುವ ಮೂಲಕ ಸೊಂಗಾ,ಫುಗಡಿ,ಗೌರಿಚೋಬಾಳ, ಸಂಕಾಸುರ್, ಫತಂಗಾ , ಕಾಳೆ ಡೊಂಗರಾ ನಿಲೆ ಝಾಲೆ ಸಖಯಾ ಪಾವುಸ ಪಡೆ ಹೋ ಮಳೆ ಹಾಡು, ಪರಿಸರಕ್ಕೆ ಸಂಬಂಧಿಸಿ ಹಾಡುಗಳು,ಗಿಡಮರಗಳ ಹಾಡುಗಳು, ನದಿ ಹಳ್ಳಗಳ ಹಾಡುಗಳು ಎಂಥ ಹಲವಾರು ಹಾಡುಗಳು ಹಾಡುತ್ತಾ ಕುಣಿಯುತ್ತಾ ಎಲ್ಲಾ ಜನರ ಮನೋರಂಜನೆ ಮಾಡಿದರು.
ರಾತ್ರಿ 3 ಘಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಪೌರಾಣಿಕ ಖೇಲ್ ಜಾಲಂಧರ ವಧ ನಾಟಕ ಮಾಡಲಾಯಿತು.ನಂತರ ಪಾಲನಾ ಹಾಡು ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಈ ಸಂಧರ್ಭದಲ್ಲಿ ಊರಿನ ಪ್ರಮುಖ ಬುಧವಂತರು ಗಳಾದ ಕಮಲಾಕರ ವೇಳಿಪ, ಕುಯರು ವೇಳಿಪ,ಮೀರಾಶಿ ಗಳಾದ ವಸಂತ ವೇಳಿಪ, ಗಂಪಾ ವೇಳಿಪ,ವಿಠೋಬಾ ವೇಳಿಪ, ಕೃಷ್ಣಾ ವೇಳಿಪ,ಜನಪದ ಕಲಾವಿದರಾದ ಗಣಪತಿ ವೇಳಿಪ ಹಾಗೂ ಊರಿನ ಎಲ್ಲ ಪುರುಷರು,ಮಹಿಳೆಯರು ,ಮಕ್ಕಳು,ಸಂಬಂಧಿ ಕರು, ಗ್ರಾಮಸ್ಥರು ಭಾಗವಹಿಸಿದ್ದರು.
