Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಒಂದು ಹೆಣ್ಣಿನ ಮನಸ್ಸನ್ನು ಯಾವತ್ತೂ ನೋಯಿಸಬಾರದು, ತಾಯಿಯು ಕೋಪದಲ್ಲಿಯೂ ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ಹೆಣ್ಣಿನಲ್ಲಿ ದೇವತೆಯನ್ನು ಕಾಣಬೇಕು. ಹೆಣ್ಣಿನ ಮನಸ್ಸು ನೋಯಿಸಿದರೆ ಕೆಟ್ಟದಾಗುತ್ತಾ ಹೋಗುತ್ತದೆ. ಹೆಣ್ಣನ್ನು ಯಾವತ್ತೂ ಗೌರವಿಸಿ ಎಂದು ಭಾರತ ಸರ್ಕಾರದ ಆದಾಯ ತೆರಿಗೆ ನಿರೀಕ್ಷಕರಾದ ಬಿ.ಎಂ.ಸುಮನ್ ಅಭಿಪ್ರಾಯಪಟ್ಟರು.

ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 20 ರಂದು ಮಂಗಳವಾರ ಸಂಜೆ 4 ಗಂಟೆಗೆ ಪಣಜಿಯ ಪೊಮೆಂಟೊ ಸಭಾಗೃಹದಲ್ಲಿ ಆಯೋಜಿಸಿದ್ದ “ದಸರಾ ಸಂಭ್ರಮ” ದುರ್ಗಾಪೂಜೆ ಹಾಗೂ ಬನ್ನಿ ವಿನಿಮಯ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸ ಅವರು ಮಾತನಾಡುತ್ತಿದ್ದರು.

Banner Ad

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೋವಾದ ಭಾರತೀಯ ಜೈನ ಸಂಘಟನೆಯ ರಾಜ್ಯಾಧ್ಯಕ್ಷರಾದ ಭರತ್ ಪಾಟೀಲ್ ಮಾತನಾಡಿ-ನಮ್ಮ ಮನೆಯಲ್ಲಿರುವ ಪ್ರತಿಯೊಬ್ಬ ಹೆಣ್ಣು ಕೂಡ ತಾಯಿ, ತಂಗಿ, ಅಕ್ಕನ ಸ್ವರೂಪವೇ ಆಗಿದ್ದಾಳೆ. ಯಾವುದೇ ಅಪೇಕ್ಷೆ ಇಲದೆಯೇ ಮನೆಯಲ್ಲಿ ನಮ್ಮ ಎಲ್ಲ ಕೆಲಸ ಮಾಡುವಳು ಹೆಣ್ಣೇ ಆಗಿದ್ದಾಳೆ. ಹೆಣ್ಣನ್ನು ಗೌರವಿಸದ ಮನೆ ಎಂದೂ ಕೂಡ ಮುಂದೆ ಬರಲು ಸಾಧ್ಯವಿಲ್ಲ ಎಂದರು.
ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತಡಾಗಿ- ಗೋವಾ ಕನ್ನಡ ಸಮಾಜವನ್ನು ಕಟ್ಟಿ ಸಾಕಷ್ಟು ಜನ ಈ ಕನ್ನಡದ ರಥವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ನಮ್ಮ ಕನ್ನಡ ಸಮಾಜವು ಪ್ರತಿ ವರ್ಷವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳಿಗೆ ತಮೆಲ್ಲರ ಸಹಾಯ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಆರಂಭದಲ್ಲಿ ಕೃಷ್ಣವೇಣಿ ಸಾಂಸ್ಕøತಿಕ ವೃಂದದವರು ನಾಡಗೀತೆ ಹಾಡಿದರು, ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ಕಾರ್ಯಕ್ರಮ ನಿರೂಪಿಸಿದರು. ಗೋವಾ ಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯ ಚಿನ್ಮಯ.ಸಿ ಅತಿಥಿಗಳನ್ನು ಪರಿಚಯಿಸಿದರು. ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಕೊನೆಯಲ್ಲಿ ವಂದನಾರ್ಪಣೆಗೈದರು.

Banner Ad