Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿಗೆ ಶಿಕ್ಷಣ ಅತಿ ಅಗತ್ಯವಿದೆ ಮಾನವ ನಾಗಲು ಸಂಸ್ಕಾರಯುತ ಶಿಕ್ಷಣ ಅತಿ ಮುಖ್ಯವಾಗಿದೆ. ಜೀವನದಲ್ಲಿ ಸಂಸ್ಕೃತಿ ಮತ್ತು ಕಾಳಜಿ ಪ್ರತಿಯೊಬ್ಬರು ವಹಿಸಬೇಕು ಎಂದು ಮಾಜಿ ಶಾಸಕ ಗಂಗಾಧರ ಭಟ್ ಹೇಳಿದರು.

Banner Ad

ಅವರು ಜೊಯಿಡಾದ ಕುಣಬಿ ಸಮಾಜ ಭವನದಲ್ಲಿ ಸೇವಾ ಭಾರತಿ ಟ್ರಸ್ಟ್ ಹುಬ್ಬಳ್ಳಿ, ಸಪ್ತಮುಖಿ ಶಿಕ್ಷಣ ಪ್ರಕಲ್ಪ, ಆಚಾರ್ಯ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು .
ಹಿಂದೆ ಜೊಯಿಡಾತಾಲೂಕು ಕಾರವಾರ ಕ್ಷೇತ್ರಕ್ಕೆಇದ್ದಾಗ 2004 ರಿಂದ 2008 ತನಕ ನಾನು ಶಾಸಕನಾಗಿದ್ದೆ, ಆಗ ಡಿಪ್ಲೊಮಾ, ಡಿಗ್ರಿ, ಐಟಿಐ ಕಾಲೇಜು ಮಂಜೂರು ಮಾಡಿ ಉನ್ನತ ಶಿಕ್ಷಣಕ್ಕೆ ಬುನಾದಿ ಹಾಕಿದ್ದೆ. ಅಂದು ಮುಖ್ಯ ಮಂತ್ರಿಯಾದ ಕುಮಾರ್ ಸ್ವಾಮಿಯವರು ಬೇಡಿಕೆಗೆ ಸ್ಪಂದಿಸಿದ್ದರು, ಅವರ ಕೊಡುಗೆಶಿಕ್ಷಣ ಕ್ಷೆತ್ರಕ್ಕೆ ಅಪಾರವಾಗಿದೆ . ಏನೇ ಆದರೂ ಅಪೇಕ್ಷೆ ದೊಡ್ಡದಾಗಿರಬೇಕು, ಆಗ ಸಣ್ಣ ಫಲವಾದರೂ ಸಿಗುತ್ತದೆ ಎಂದರು.

ಸಂಸ್ಥೆಯ ಏಳು ಆಚಾರ್ಯರಿಗೆ ಸನ್ಮಾನ ಮಾಡಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿದ್ದು, ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಬಳು ಕುಂಡಲಕರ , ಸುಭಾಷ್ ಗಾವಡಾ, ಮಾದೇವ ಪಾಟಣೆಕರ, ವೀಣಾ ನಾಯ್ಕ, ಸುಧೇಶ್ ಮರಾಠೆ ಇದ್ದರು. ಸಂತೋಷ್ ಸ್ವಾಗತಿಸಿದರು, ರಂಜಿತಾ ಗುರುನಾಥ ಪಾಟಣೆಕರ ವಂದಿಸಿದರು.

Banner Ad