ಸುದ್ಧಿಕನ್ನಡ ವಾರ್ತೆ
ಪಣಜಿ (ವಾಸ್ಕೊ): ವಾಸ್ಕೋದ ಹೆಡ್ ಲ್ಯಾಂಡ್ ಸಡಾದಲ್ಲಿರುವ ಮುರ್ಗಾಂವ್ ಬಂದರು ಪ್ರಾಧಿಕಾರದ (ಎಂಪಿಎ) ಭೂಮಿಯಲ್ಲಿ ಅನುಮತಿ ಇಲ್ಲದೆ ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಂಬಂಧಿಸಿದಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದಲ್ಲಿ ಮಹತ್ವದ ವಿಚಾರಣೆ ನಡೆಯಿತು. ಈ ವಿವಾದಾತ್ಮಕ ಭೂಮಿಯನ್ನು ಖರೀದಿಸುವ ಕುರಿತು ರಾಜ್ಯ ಸರ್ಕಾರದ ಪ್ರಸ್ತಾವನೆಯ ಕುರಿತು ಎರಡು ವಾರಗಳಲ್ಲಿ ವಿವರವಾದ ಅಫಿಡವಿಟ್ ಕಲಿಸುವಂತೆ ಗೋವಾ ಮೂಲದ ಬಾಂಬೆ ಹೈಕೋರ್ಟ್ ಗೋವಾ ಮುಖ್ಯ ಕಾರ್ಯದರ್ಶಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಪ್ರತಿಮೆಯ ಸ್ಥಾಪಿಸುವ ಕಾರ್ಯ ಫೆಬ್ರವರಿ 16, 2026ರಂದು ಪ್ರಾಧಿಕಾರದ ಜಾಗದಲ್ಲಿ ಪ್ರಾರಂಭವಾಗಿತ್ತು. ಫೆಬ್ರವರಿ 20 ರಂದು ಈ ಅಕ್ರಮ ನಿರ್ಮಾಣದ ವಿರುದ್ಧ ಮುರ್ಗಾಂವ್ ಪೆÇಲೀಸರು ಮತ್ತು ಸ್ಥಳೀಯ ಪುರಸಭೆಗೆ ಪ್ರಾಧಿಕಾರವು ದೂರು ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅಂತಿಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗಿದೆ ಎಂದು ಮುರ್ಗಾಂವ್ ಬಂದರು ಪ್ರಾಧಿಕಾರ ಹೈಕೋರ್ಟ್ ಮೆಟ್ಟಿಲು ಏರಿತ್ತು.
