ಸುದ್ದಿ ಕನ್ನಡ ವಾರ್ತೆ

ಬೇಡ್ತಿ ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ ಬಯಲು ಸೀಮೆಯ ಜಿಲ್ಲೆಗಳಿಗೆ ಕೊಂಡೊಯ್ಯುವ ನದಿ ಜೋಡಣೆ ಯೋಜನೆ ವಿರೋಧಿಸಿ ಅಕ್ಟೋಬರ್ 10 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಬಿಡ್ತಿ ಹಾಗು ಅಘನಾಶಿನಿ ನದಿಗಳನ್ನು ತಿರುಗಿಸಿ ಬಯಲು ಸೀಮೆಗೆ ಕೊಂಡೊಯ್ದರೆ ಮಲೆನಾಡು ಮತ್ತು ಕರಾವಳಿಯಲ್ಲಿ ಈ ನದಿಗಳ ಪಾತ್ರದಲ್ಲಿ ವಾಸಿಸುವ ಜನರಿಗೆ ನೀರಿನ ಕೊರತೆ ಉಂಟಾಗಲಿದೆ. ನದಿಗಳಲ್ಲಿ ಕನಿಷ್ಠ ನೀರಿನ ಅರಿವು ಇಲ್ಲದೆಯೇ ಅಂತರ್ಜಲ ಕುಸಿತ ಕಾಡು ಪ್ರಾಣಿಗಳಿಗೆ ಮತ್ತು ಕೃಷಿಕರಿಗೆ ನೀರಿನ ಬರ ಉಂಟಾಗಲಿದೆ. ಈ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಮತ್ಸ್ಯ ಸಂತತಿ ನಾಶವಾಗಿ ಕರಾವಳಿ ಹೊಳ ಪ್ರದೇಶಗಳಿಗೆ ಉಪ್ಪಿನ ನೀರು ನುಗ್ಗಲಿದೆ.

ಬೇಡ್ತಿ ಹಾಗೂ ಅಗನಾಶಿನಿ ನದಿ ಜೋಡಣೆ ವಿರೋಧಿಸಿ ಅಕ್ಟೋಬರ್ 10ರಂದು ಪಶ್ಚಿಮ ಘಟ್ಟ ಹಾಗೂ ನದಿ ಕಡಿಮೆಗಳನ್ನು ಉಳಿಸಲು ಆಗ್ರಹಿಸಿ ಬೇಡ್ತಿ ಅದನಾಶನಿ ಕೊಳ್ಳ ಸಂರಕ್ಷಣ ಸಮಿತಿಯು ಈ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಬೃಹತ್ ಪ್ರತಿಭಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಗರಿಕರು, ಬೆಂಗಳೂರಿನಲ್ಲಿ ವಾಸಿಸುವ ಉತ್ತರ ಕನ್ನಡ ಜಿಲ್ಲೆಯ ಮೂಲದ ಜನರು, ಪರಿಸರ ಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಬೃಹತ್ ಹೋರಾಟದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಪರಿಸರ ತಜ್ಞ ಅ.ನ ಎಲ್ಲಪ್ಪ ರೆಡ್ಡಿ, ಕವಿ ಜಯಂತ ಕಾಯ್ಕಿಣಿ, ಸೇರಿದಂತೆ 10 ಹಲವು ಜನ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಬೇಡ್ತಿ ಹಾಗೂ ಅಗನಾಶಿನಿ ನದಿಗಳಲ್ಲಿ ವರ್ಷಪೂರ್ತಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವುದಿಲ್ಲ. ಈ ನದಿಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ಮಾತ್ರ ಸಾಕಷ್ಟು ನೀರಿರುತ್ತದೆ. ಇದರಿಂದಾಗಿ ವರ್ಷವಿಡಿ ಈ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುತ್ತದೆ ಎಂದು ಸರ್ಕಾರ ಹಾಕಿರುವ ಲೆಕ್ಕಾಚಾರ ತಪ್ಪಾಗಿದೆ. ಒಂದು ವೇಳೆ ನದಿ ತಿರು ಯೋಜನೆಯು ಜಾರಿಗೆ ಬಂದರೆ ಈ ನದಿಗಳಲ್ಲಿ ಸಹಜವಾಗಿ ಹರಿಯುವ ನೀರು ಕೂಡ ಇಲ್ಲದೆ ಅಂತರ್ಜಲ ಕುಸಿದು ನೀರಿನ ಕೊರತೆ ಉಂಟಾಗಲಿದೆ. ಈ ಭಾಗವು ಪ್ರಮುಖವಾಗಿ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಭೂಕುಸಿತದಂತಹ ಅಪಾಯವು ಹೆಚ್ಚಾಗಲಿದೆ. ನದಿಯಲ್ಲಿ ನೀರಿನ ಕೊರತೆ ಉಪ್ಪು ನೀರು ಕರಾವಳಿ ಪ್ರದೇಶಕ್ಕೆ ನುಗ್ಗಲಿದೆ ಎಂದು ಸಮಿತಿಯು ತಿಳಿಸಿದೆ.