ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಗುಳ್ಳಾಪುರದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭೀಕರ ಅಪಘಾತ ಅದೃಷ್ಟವಶಾತ್ ಒಂದು ತಪ್ಪಿದೆ.
ಬಾರಿ ವೇಗವಾಗಿ ಬಂದ ಕಂಟೇನರ್ ಮುಂಭಾಗದಿಂದ ಬರುತ್ತಿದ್ದ ಎರಡು ಕಾರಿಗೆ ಡಿಕ್ಕಿ ಸಂಭವಿಸದೆಯೇ ಕೂದಲೆಯ ಅಂತರದಲ್ಲಿ ಅರಣ್ಯಕ್ಕೆ ಹೋಗಿ ಬಿದ್ದಿದೆ. ಈ ಭೀಕರ ದೃಶ್ಯ ಕಂಡ ಕಾರಿನಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಇಷ್ಟೇ ಅಲ್ಲದೆ ಕಾರಿನಲ್ಲಿ ಇದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಗುಳ್ಳಾಪುರದ ನಿವಾಸಿಗಳೇ ಆಗಿದ್ದರು ಎನ್ನಲಾಗಿದೆ.
ಕಂಟೇನರ್ ಚಾಲಕ ಭಾರಿ ವೇಗವಾಗಿ ಬರುತ್ತಿದ್ದ ಎನ್ನಲಾಗಿದ್ದು ಈತನ ಅಜಾಗರೂಕತೆಯಿಂದ ಭಾರಿ ಅನಾಹುತ ಸಂಭವಿಸುತ್ತಿತ್ತು , ಸಂಭವಿಸುತ್ತಿದ್ದ ಭೀಕರ ಘಟನೆಯೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ.
ಅರಬೈಲ್ ಘಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ವಾಹನಗಳ ಚಾಲಕರು ಅಜಾಗರೂಕತೆಯಿಂದ ವೇಗವಾಗಿ ವಾಹನ ಓಡಿಸುತ್ತಿರುವುದು ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಅಲ್ಲಲ್ಲಿ ಟ್ರಾಫಿಕ್ ಪೊಲೀಸ್ ಕಣ್ಗಾವಲು ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
