ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಉಪ ಕೇಂದ್ರ ರಾಮನಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಲ್ ರಾಕ್ ಆಯುಷ್ಮಾನ್ ಆರೋಗ್ಯ ಕೇಂದ್ರ ಅನಮೋಡ ಹಾಗೂ ರಕ್ತ ನಿಧಿ ಕೇಂದ್ರ ಸಾರ್ವಜನಿಕ ಆಸ್ಪತ್ರೆ ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ *ಸ್ವಯಂ* *ಪ್ರೇರಿತ* *ರಕ್ತದಾನ* *ಶಿಬಿರ* ಆಯುಷ್ಮಾನ್ ಆರೋಗ್ಯ ಕೇಂದ್ರ ಜೋಯಿಡಾ ದ ಅನ್ಮೋಡದಲ್ಲಿ ಹಮ್ಮಿಕೊಳ್ಳಲಾಯಿತು .
ಈ ಕಾರ್ಯಕ್ರಮಕ್ಕೆ ರಕ್ತ ನಿಧಿ ಕೇಂದ್ರದ ಡಾ. ನವೀನ್ ಕುಮಾರ್ ಹಾಗೂ ಲಕ್ಷ್ಮಿಕಾಂತ್ ಕಾನೇಕರ್ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಮತ್ತು ರೋಗಗಳನ್ನು ತಡೆಯಲು ಸಹಾಯವಾಗುತ್ತದೆ ಎಂದರು ಶ್ರೀ ಸ್ವಾಮಿ ಅಯ್ಯಪ್ಪ ಪುರುಷ ಸ್ವಸಹಾಯ ಸಂಘ , ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ರಕ್ತದಾನ ಮಾಡಲಾಯಿತು ಈ ಕಾರ್ಯಕ್ರಮವನ್ನು ಮನೋಹರ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ಸಿಬಿಡಿ -ಆರ್ ಸೆಟ್ ರಾಮನಗರ ಆಯೋಜಿಸಿ ವಂದಿಸಿದರು ಒಟ್ಟು 23 ಜನರು ರಕ್ತದಾನ ಮಾಡಿದರು.
