ಸುದ್ದಿ ಕನ್ನಡ ವಾರ್ತೆ
​ಶಿರಸಿ : ಇತ್ತೀಚಿಗೆ ಶ್ರೀ ಸ್ವರ್ಣವಲ್ಲಿ ಶ್ರೀಗಳನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಸೋಂದಾದಲ್ಲಿ ಭೇಟಿ ಮಾಡಿ ದರ್ಶನ-ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ದೇಶಪಾಂಡೆ ಅವರು ಬೆಡ್ತಿ-ಅಘನಾಶಿನಿ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಬಿಡಬೇಕು ಎಂದು ತಾವು ಬರೆದ ಪತ್ರಗಳ ಪ್ರತಿಯನ್ನು ಪೂಜ್ಯ ಶ್ರೀಗಳಿಗೆ ನೀಡಿದರು. ಬೆಡ್ತಿ ಯೋಜನೆಯಿಂದ ಉ.ಕ ಜಿತ್ಗೆ ಏನು ಪ್ರಯೋಜನ ಇಲ್ಲ, ಇದು ವಿಫಲ ಯೋಜನೆ ಆಗುತ್ತದೆ. 2022 ರಲ್ಲೂ ತಾವು ಈ ಯೋಜನೆ ನಿರರ್ಥಕ ಎಂದೇ ಹೇಳಿದ್ದನ್ನು ದೇಶಪಾಂಡೆ ಅವರು ನೆನಪಿಸಿದರು.
​ಪೂಜ್ಯ ಸ್ವರ್ಣವಲ್ಲಿ ಶ್ರೀಗಳು 1992 ರಲ್ಲಿ ದೆಹಲಿಗೆ ಬೆಡ್ತಿ ನಿಯೋಗ ಹೋಗಿದ್ದನ್ನು ದೇಶಪಾಂಡೆ ಅವರ ಗಮನಕ್ಕೆ ತಂದರು. ಈಗ ಪುನಃ ಎಲ್ಲ ಶಾಸಕರು, ಸಂಸದರ ಜೊತೆ ಸಿ.ಎಂ. ಭೇಟಿ ಮಾಡಬೇಕು ಎಂಬ ಬೆಡ್ತಿ ಸಮಿತಿ ಪತ್ರವನ್ನು ದೇಶಪಾಂಡೆ ಅವರಿಗೆ ನೀಡಿದರು.

ಶಿರಸಿ & ಯಲ್ಲಾಪುರ ಶಾಸಕರ ಜೊತೆ ಸಿ.ಎಂ. ಭೇಟಿ ಮಾಡುತ್ತೇವೆ ಎಂಬ ಭರವಸೆಯನ್ನು ದೇಶಪಾಂಡೆ ನೀಡಿದರು. ಬೆಡ್ತಿ-ಅಘನಾಶಿನಿ ಉಳಿಸಿ ಎಂಬ ಸೆ.10 ರ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಪತ್ರವನ್ನು ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ದೇಶಪಾಂಡೆ ಅವರಿಗೆ ನೀಡಿದರು.

​ಭಟ್ಟಳದ ರಾಮಾಮೋಗೆರ, ರಮೇಶ ದುಬಾಶಿ, ದೀಪಕ್ ದೊಡ್ಡೂರು, ವೆಂಕಟೇಶ್ ಹೊಸಬಾಳೆ, ನಿತಿನ್ ಕಾಸರಕೋಡ, ಶ್ರೀ ಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ, ಕಾರ್ಯದರ್ಶಿ ಜಿ.ವಿ.ಹೆಗಡೆ, ಆರ್.ಎನ್.ಹೆಗಡೆ ಮುಂತಾದವರಿದ್ದರು.