Banner Ad

ಸುದ್ಧಿಕನ್ನಡ ವಾರ್ತೆ
ಮಲಪ್ರಭೆಯ ಉಗಮ ಸ್ಥಾನ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಸಿದ್ದನಕೊಳ್ಳ ಪೂಜ್ಯರ ನೂತನ ಆಶ್ರಮ ಒಂದು ಉಗಮವಾಗಲಿದೆ ಕನ್ನಡಿಗ ಗೊವಾದ ಉದ್ಯಮಿ ಹಾಗೂ ಕಸಾಪ ಗೋವಾ ರಾಜ್ಯಾದ್ಯಕ್ಷ ಸಿದ್ದಣ್ಣ ಮೇಟಿ ರವರು ಸಿದ್ದನಕೊಳ್ಳ ಪೂಜ್ಯರ ಆಶ್ರಮ ಕಟ್ಟಲು ಕರ್ನಾಟಕ ಗೋವಾದ ಗಡಿಭಾಗವಾದ ಕಣಕುಂಬಿ ಗ್ರಾಮದ ನಮ್ಮ ಸ್ವಂತ ಇಪ್ಪತ್ತೈದು ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸಿದ್ದನಕೊಳ್ಳದ ಪೂಜ್ಯರು ಡಾ. ಶಿವಕುಮಾರ ಮಹಾಸ್ವಾಮಿಗಳ ಆಶ್ರಮ ನಿರ್ಮಿಸುವ ಉದ್ದೇಶಕ್ಕಾಗಿ ಈ ಭೂಮಿಯನ್ನು ದಾನವಾಗಿ ನೀಡಿದ್ದು ಗೋವಾ ಕನ್ನಡಿಗರಿಗೆ ಮತ್ತು ಕನ್ನಡಿಗರಿಗೆ ಈ ಆಶ್ರಮ ಅನುಕೂಲವಾಗಲಿದೆ ಎನ್ನುವ ಉದ್ದೇಶಕ್ಕಾಗಿ ಎರಡು ಎಕರೆ ಭೂಮಿಯನ್ನು ಪೂಜ್ಯರಿಗೆ ಆಶ್ರಮ ಕಟ್ಟಲು ನೀಡಿದ್ದೇನೆ ಎಂದು ಸಿದ್ಧಣ್ಣ ಮೇಟಿ ಹೇಳಿದರು

 

Banner Ad

ಗೋವಾದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ಎಕರೆ ಭೂಮಿ ಸ್ವಯಂ ಪ್ರೇರಣೆಯಿಂದ ನಾನು ದಾನ ಮಾಡುತ್ತೇನೆ ಎಂದು ಎಲ್ಲಾ ಗೊವಾ ಕನ್ನಡಿಗರ ಮುಂದೆ ಘೋಷಿಸಿದಂತೆ ಮಾತಿಗೆ ತಕ್ಕಂತೆ ನಡೆದುಕೊಂಡು ನಮ್ಮನ್ನು ಕಣಕುಂಬಿ ಗ್ರಾಮಕ್ಕೆ ಕರೆದುಕೊಂಡು ಬಂದು ಆಶ್ರಮಕ್ಕೆ ದಾನವಾಗಿ ನೀಡಿದ್ದ ಜಮೀನನ್ನು ತೋರಿಸಿದರು.

ಜಮೀನು ನೋಡಿದ ನಂತರ ಪರಮಪೂಜ್ಯ ಡಾ. ಶಿವಕುಮಾರ ಪೂಜ್ಯರು ಸುಂದರವಾದ ಅರಣ್ಯ ಪ್ರದೇಶದಲ್ಲಿ ಮಧ್ಯ ನಮ್ಮ ಉತ್ತರ ಕರ್ನಾಟಕದ ಜೀವನಾಡಿ ರೈತರ ತಾಯಿ ಮಲಪ್ರಭೆ ಉಗಮ ಸ್ಥಾನದಲ್ಲಿ ನಮ್ಮ ಆಶ್ರಮ ನಿರ್ಮಾಣವಾಗುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಪೂಜ್ಯರು ಖುಷಿಯ ನುಡಿಗಳನ್ನಾಡಿದರು….

 

ಈ ಆಶ್ರಮದಿಂದ ಕರ್ನಾಟಕ ಮತ್ತು ಗೋವಾ ಕನ್ನಡಿಗರಿಗೆ ಅನುಕೂಲವಾಗಲಿದ್ದು ಮಲಪ್ರಭೆಯ ಉಗಮ ಸ್ಥಾನ ದಟ್ಟಾರಣ್ಯ ಪ್ರದೇಶದಲ್ಲಿ ಉತ್ತರ ಕರ್ನಾಟಕ ಆಶ್ರಮ ನಿರ್ಮಾಣವಾಗುತ್ತಿರುವುದು ಭಕ್ತರಿಗೆ ಖುಷಿ ತಂದಿದೆ ಎಂದು ಪೂಜ್ಯರ ಜೊತೆ ಆಗಮಿಸಿದ್ದ ಭಕ್ತರೊಬ್ಬರು ಸಂತೋಷದ ನುಡಿಗಳನ್ನಾಡಿದರು.

Banner Ad