ಸುದ್ದಿ ಕನ್ನಡ ವಾರ್ತೆ
ಬೆಂಗಳೂರು- ಬಸವ ಸಮಿತಿಯ ಸಂಸ್ಥಾಪಕರು ಹಾಗೂ ಏಕೈಕ ಕನ್ನಡಿಗ ರಾಷ್ಟ್ರಪತಿಗಳಾದ ಸನ್ಮಾನ್ಯ ಡಾ. ಬಿ.ಡಿ. ಜತ್ತಿಯವರ 114 ನೇ ಜಯಂತೋತ್ಸವ ಹಾಗೂ ಬಸವ ಸಮಿತಿಯ 62 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪಕ್ಕೆ *ದಾಸೋಹ ರತ್ನ ಪ್ರಶಸ್ತಿ* ಸ್ವೀಕರಿಸಲು ಆಗಮಿಸಿದ One World One Family Misson, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ *ಸದ್ಗುರು ಶ್ರೀ ಮಧುಸೂದನ ಸಾಯಿ* ಅವರು *ಮಹಾನ್ ದಾರ್ಶನಿಕ ಬಸವಣ್ಣನವರ ಪ್ರತಿಮೆಗೆ* ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಖ್ಯಾತ ಉದ್ದಿಮೆದಾರರಾದ ಶ್ರೀ ಮಿಥುನ ವಿಠ್ಠಲ ಹುಗ್ಗಿ, ಬಸವ ಸಮಿತಿಯ ಹಿರಿಯ ನಿರ್ದೇಶಕರು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು ಉಪಸ್ಥಿತರಿದ್ದರು.