ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಅರಣ್ಯ ಕಾಲೇಜು ಪ್ರರಂಬಿಸಲು  ಅಗ್ರಹಿಸಿ ಇಂದು ಉಪ ತಹಸೀಲ್ದಾರ ಭಜಂತ್ರಿ ಅವರ ಮೂಲಕ  ಅರಣ್ಯ ಸಚಿವರಿಗೆ ಮನವಿ  ಮಾಡಲಾಯಿತು.
ಜೊಯಿಡಾ ತಾಲೂಕಿನ ಕಾಳಿ ಹುಲಿ ಯೋಜನೆ ಸೇರಿ ಜಿಲ್ಲೆಯ 6 ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಒಟ್ಟು 60 ವೀಕ್ಷಕರನ್ನು ಆ ವಿಭಾಗ ವ್ಯಾಪ್ತಿಯ ಸ್ಥಳೀಯರನ್ನೇ ನೇಮಕ ಮಾಡಬೇಕು ಮತ್ತು ಜೊಯಿಡಾಲ್ಲಿ ಅರಣ್ಯ ಕಾಲೇಜು ಪ್ರಾರಂಭಿಸಬೇಕು,ಪ್ರಾರಂಭಿಸದೇ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕುಣಬಿ ಸಮಾಜದಿಂದ ತಹಶೀಲ್ದಾರ್ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶ 30 ವೀಕ್ಷಕರು, ಕಾರವಾರ ಪ್ರಾದೇಶಿಕ ವಿಭಾಗ 7, ಹಳಿಯಾಳ ಪ್ರಾದೇಶಿಕ ವಿಭಾಗ 5, ಯಲ್ಲಾಪುರ ಪ್ರಾದೇಶಿಕ ವಿಭಾಗ 6, ಶಿರಸಿ ಪ್ರಾದೇಶಿಕ ವಿಭಾಗ 7, ಹೊನ್ನಾವರ ಪ್ರಾದೇಶಿಕ ವಿಭಾಗ 5 ಒಟ್ಟು 60 ಮತ್ತು 7 ಬ್ಯಾಕ್ ಲಾಗ್ ಹುದ್ದೆಗಳು ಹೀಗೆ ಒಟ್ಟು 67 ಅರಣ್ಯ ವೀಕ್ಷಕ ಗ್ರೂಪ್ “ಡಿ” ಹುದ್ದೆಗಳಿಗೆ ನೇರ ನೇಮಕಾತಿಗೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆಯ್ಕೆ ಪ್ರಾಧಿಕಾರ ಕೆನರಾ ವೃತ್ತ ಶಿರಸಿ ಅರ್ಜಿ ಆಹ್ವಾನಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 87 ರಷ್ಟಿರುವ ಕಾಡು ಸ್ಥಳೀಯರೇ ಕಾಪಾಡಿದ್ದಾರೆ. ಈ ಕಾಡಿನ ರಕ್ಷಣೆಗೆ ಸ್ಥಳೀಯ ಬುಡಕಟ್ಟು ಕುಣಬಿ, ಗೌಳಿ, ಹಾಲಕ್ಕಿ, ದೇವಳಿ ಮತ್ತು ಇತರ ಪಾರಂಪರಿಕ ಅರಣ್ಯವಾಸಿ ಜನರು ಕಾರಣರಾಗಿದ್ದಾರೆ . ಇವರು ತಮ್ಮ ದೈನಂದಿನ ಬದುಕಿಗೆ ಸಂಪೂರ್ಣವಾಗಿ ಕಾಡನ್ನು ಅವಲಂಬಿಸಿದ್ದಾರೆ. ಕಾಡಿನ ಉಳಿವಿಗಾಗಿ ರಕ್ತವನ್ನೇ ಸುರಿದಿದ್ದಾರೆ. ಆದರೆ ಸರ್ಕಾರದ ಅಭಿವೃದ್ಧಿಯ ಹೆಸರಿನಲ್ಲಿ ಸೂಪಾ,ಅಂಬಿಕಾ ನಗರ, ಕೊಡಸಳ್ಳಿ, ಕದ್ರಾ, ಕಾನೇರಿ ಸೇರಿದಂತೆ ಕಾಳಿ ಕೊಳ್ಳದಲ್ಲಿ ನಿರ್ಮಾಣವಾದ ಜಲಾಶಯದಿಂದ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಹಾಳಾಗಿದೆ. ಆದರೆ ಸ್ಥಳೀಯ ಜನರು ಕಾಡನ್ನು ದೇವರೆಂದು ಪುಜಿಸುತ್ತಿದ್ದಾರೆ. ಇಲ್ಲಿ ಯಾವುದೇ ಕೈಗಾರಿಕೆ ಸೇರಿದಂತೆ ಉದ್ಯೋಗ ಕನಸಿನ ಮಾತಾಗಿದೆ. ಕಾಡು ಮತ್ತು ಪರಿಸರದೊಂದಿಗೆ ಸಹಬಾಳ್ವೆ ನಡೆಸುವ ಜನರು ಬದುಕು ಕಟ್ಟಿಕೊಳ್ಳಲು ಮತ್ತು ಅರಣ್ಯ ಉಳಿಯಲು ಇಲಾಖೆಯಲ್ಲಿ ಸೃಷ್ಟಿಯಾಗುವ ಉದ್ಯೋಗದಲ್ಲಿ ಸ್ಥಳಿಯರನ್ನೇ ಮಾತ್ರ ಕಡ್ಡಾಯವಾಗಿ ನೇಮಕಾತಿ ಮಾಡಬೇಕು. ಹೊರಗಿನವರು ಬಂದರೆ ಕಾಡಿನ ವಿನಾಶ ಖಂಡಿತ ನಡೆಯಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ 30 ವೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ಹಿಂದುಳಿದ ಪ್ರವರ್ಗ 1 ಬರುವ ಕುಣಬಿ, ಗೌಳಿ, ಹಾಲಕ್ಕಿ, ಪಟಗಾರ, ದೇವಳಿ ಜನರು ಬಹುಸಂಖ್ಯಾತ ಇದ್ದಾರೆ. ಆದರೆ ಪ್ರವರ್ಗ 1 ಕ್ಕೆ ಒಂದೂ ಹುದ್ದೆ ಮಿಸಲು ಇಡದೇಅನ್ಯಾಯ ಮಾಡಲಾಗಿದೆ. ಈ ಹಿಂದುಳಿದ ಜನರಿಗೆ ಉದ್ಯೋಗ ನೀಡಿದರೆ ಕಾಡಿನಿಂದ ಹೊರಗೆ ಹಾಕಲು ಅರಣ್ಯ ಇಲಾಖೆಗೆ ಕಷ್ಟ ಆಗಲಿದೆ. ಇದಕ್ಕೆ ಮಿಸಲಾತಿ ಕಡೆಗಣನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನಲ್ಲಿ ಶೇಕಡಾ 90 ರಷ್ಟು ಕಾಡು ಇದೆ. ಜನರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಲು ಅರಣ್ಯ ಶಿಕ್ಷಣ ಕೇಳಲಾಗುತ್ತದೆ. ಅರಣ್ಯ ಕಾಲೇಜು ಪ್ರಾರಂಭಿಸಿದರೆ ಸ್ಥಳೀಯರೇ ಕಲಿತು ಉದ್ಯೋಗ ಮಾಡಬಹುದು. ಮತ್ತು ಅಧ್ಯಯನ ಆಗದೇ ಇರುವ ಅನೇಕ ಸಂಘತಿಗಳಿವೆ ಇದರ ಮೇಲೆ ಅಧ್ಯಯನ ನಡೆದು ಅಭಿವೃದ್ಧಿ ಮಾಡಬಹುದಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಅರವಿಂದ ನಾಯ್ಕ ಹುಡಸಾ, ಈಶ್ವರ ಗಾವಡಾ, ಸುಭಾಷ್ ವೇಳಿಪ, ಗುಣೊ ಗಾವಡಾ, ಗಜಾನನ ವೇಳಿಪ, ಸುಭಾಷ್ ಮಿರಾಶಿ ಸಿಸೈ, ಕಾಂತಾ ಗಾವಡಾ, ರಾಮಾ ಬಾಬು ಮಿರಾಶಿ, ಗಜಾನನ ಮಿರಾಶಿ ಮುಂತಾದವರು ಇದ್ದರು.