ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಜೋಯಿಡಾ,ಕುಂಬಾರವಾಡ(ಕಾತೇಲಿ) ಅಣಶಿ, ಉಳವಿ,ಗಾಂಗೋಡಾ, ನಂದಿಗದ್ದೆ,ಪ್ರಧಾನಿ,ನಾಗೋಡಾ, ಅವೇಡಾ(ಇಳವಾ) ಈ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ನಾಳೆಯ ದಿನ ದಿನಾಂಕ 10 ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಲೈನ್ 110\33\11 ಕೆವಿ ಗಣೇಶಗುಡಿ ಸಬ್ ಸ್ಟೇಷನಿನಲ್ಲಿ ಹಾಗೂ ಜೋಯಿಡಾ 33\11 ರಲ್ಲಿ ತುರ್ತು ನಿರ್ವಹಣೆ ಕೆಲಸ ನಡೆಯಲಿದೆ ಎಂದು ದಾಂಡೇಲಿ ಹೆಸ್ಕಾಂ ಇಲಾಖೆಯ ಎಇಇ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಕಾರಣ ಈ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಕೆಲಸ ಮುಗಿದ ತಕ್ಷಣ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
