ಸುದ್ದಿ ಕನ್ನಡ ವಾರ್ತೆ

ಸರ್ಕಾರಿ ಪ್ರೌಢಶಾಲೆ ಮಂಗಳವಾಡ ತಾಲೂಕು ಹಳಿಯಾಳ ಶಿರಸಿ ಶೈಕ್ಷಣಿಕ ಜಿಲ್ಲೆ.
ಈ ಶಾಲೆಯು ದಿನಾಂಕ 31.08.2026 ಮತ್ತು 01.09.2026ರಂದು ಶಿವಾಜಿ ಕ್ರೀಡಾಂಗಣ ಹಳಿಯಾಳ ಇಲ್ಲಿ ನಡೆದ ಹಳಿಯಾಳ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ತಂಡವಾಗಿ ಹೊರಹೊಮ್ಮಿದೆ.

ಕ್ರೀಡಾಕೂಟದಲ್ಲಿ ಬಾಲಕರ & ಬಾಲಕಿಯರ ವಿಭಾಗದಲ್ಲಿ ಕಬ್ಬಡ್ಡಿ ಚಾಂಪಿಯನ್, ಬಾಲಕ ಮತ್ತು ಬಾಲಕಿಯರ ವಿಭಾಗದ ರಿಲೇ ಚಾಂಪಿಯನ್, ಹಾಗೂ ವೈಯಕ್ತಿಕವಾಗಿ 26 ಬಹುಮಾನಗಳೊಂದಿಗೆ ಒಟ್ಟು 30 ಬಹುಮಾನಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ಸಮರ್ಥ ಮಿರಾಶಿ
ಎತ್ತರ ಜಿಗಿತ,
ತ್ರಿವಿಧ ಜಿಗಿತ- ಪ್ರಥಮ.
ಉದ್ದ ಜಿಗಿತ- ದ್ವಿತೀಯ ಬಹುಮಾನಗಳೊಂದಿಗೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದನು. ಉಳಿದಂತೆ
110 ಮೀ ಹರ್ಡಲ್ಸ್- ಪ್ರಥಮ- ಜ್ಯೋತಿಬಾ ಕದಂ.
200ಮೀ ಓಟ – ದ್ವಿತೀಯ- ಜ್ಯೋತಿಬಾ ಕದಂ.
100ಮೀ ಓಟ – ತೃತೀಯ- ಜ್ಯೋತಿಬಾ ಕದಂ.
ಎತ್ತರ ಜಿಗಿತ -ದ್ವಿತೀಯ- ವಿಠ್ಠಲ ಬನೋಶಿ.
110 ಮೀ ಹರ್ಡಲ್ಸ್ -ದ್ವಿತೀಯ- ವಿಠ್ಠಲ ಬನೋಶಿ.
400 ಮೀ ಹರ್ಡಲ್ಸ್ -ದ್ವಿತೀಯ- ವಿಠ್ಠಲ ಬನೋಶಿ.
400 ಮೀ ಓಟ- ದ್ವಿತೀಯ- ಜ್ಞಾನೇಶ್ವರ ಭಾತಕಾಂಡೆ.
ತ್ರಿವಿಧ ಜಿಗಿತ – ತೃತೀಯ- ಜ್ಞಾನೇಶ್ವರ ಭಾತಕಾಂಡೆ ಬಹುಮಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ
ತ್ರಿವಿಧ ಜಿಗಿತ- ಪ್ರಥಮ- ಅಂಕಿತಾ ಜುವೇಕರ್.
ಚಕ್ರ ಎಸೆತ -ಪ್ರಥಮ- ಮೇಘ ಮೇತ್ರಿ
ಎತ್ತರ ಜಿಗಿತ – ದ್ವಿತೀಯ – ಸರೋಜಾ ಚವಾಣ್ .
ಎತ್ತರ ಜಿಗಿತ – ತೃತಿಯ – ಪ್ರತೀಕ್ಷಾ ಶಿರೋಡ್ಕರ್ .
ಉದ್ದ ಜಿಗಿತ- ಪ್ರಥಮ – ಪ್ರತಿಜ್ಞಾ ಶಿಂದೋಳಕರ್.
400 ಮೀ ಹರ್ಡಲ್ಸ್ – ಪ್ರಥಮ- ದಿವ್ಯ ಕಿಣಗೇಕರ್.
100ಮೀ ಓಟ – ದ್ವಿತೀಯ- ಪ್ರತಿಜ್ಞಾ ಶಿಂದೋಳಕರ್.
200ಮೀ ಓಟ – ತೃತೀಯ- ಪ್ರತಿಜ್ಞಾ ಶಿಂದೋಳಕರ್.
800ಮೀ ಓಟ – ತೃತೀಯ- ತುಳಸಾ ಪಾಟೀಲ.
400 ಮೀ ಹರ್ಡಲ್ಸ್ -ದ್ವಿತೀಯ- ರೋಹಿಣಿ ಪೋಂಡೆೇಕರ್.
100 ಮೀ ಹರ್ಡಲ್ಸ್ -ತೃತೀಯ- ರೋಹಿಣಿ ಪೋಂಡೆೇಕರ್.
100 ಮೀ ಹರ್ಡಲ್ಸ್- ದ್ವಿತೀಯ -ಸರೋಜಾ ಚೌಹಾಣ್.
400 ಮೀ ಹರ್ಡಲ್ಸ್ -ತೃತೀಯ- ಸರೋಜಾ ಚೌಹಾಣ್ ಬಹುಮಾನ ಗಳಿಸಿದರು.
ಈ ಎಲ್ಲ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಶ್ರೀ ಜನಾರ್ಧನ ಮಡಿವಾಳ ಹಾಗೂ ಶ್ರೀ ಬಸವರಾಜ ತುರಮರಿ ಅವರು ತರಬೇತಿ ನೀಡಿದ್ದರು.
ಈ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಕ್ಕೆ ಶಾಲೆಯ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ ನಾಯಕ, ಶಿಕ್ಷಕ ವೃಂದ, ಎಸ್. ಡಿ. ಎಮ್. ಸಿ., ಪಾಲಕರು, ಊರ ನಾಗರಿಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಫ ಅಪಾರ ಹರ್ಷ ವ್ಯಕ್ತಪಡಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಗುರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.