ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ದಸರಾ ಕ್ರೀಡಾ ಕೂಟವನ್ನು ಯಾರಿಗೂ ಹೇಳದೆ ಮಾಡಿದರೂ ಜಿಲ್ಲಾಧಿಕಾರಿಗಳು ಇಂಥವರನ್ನು ಯಾಕೆ ಕ್ರೀಡಾ ಇಲಾಖೆಯಲ್ಲಿ ಇರಿಸಿಕೊಳ್ಳುತ್ತಾರೆ ತಿಳಿಯುತ್ತಿಲ್ಲ ಎಂದು ತಾಲೂಕಿನ ಜನತೆ ದೂರಿದ್ದಾರೆ.
ಸೋಮವಾರ ದಿನಾಂಕ 31 ರಂದು ರಾಮನಗರದಲ್ಲಿ ದಸರಾ ಕ್ರೀಡಾ ಕೂಟ ಎಂದು ಒಂದು ಮೆಸೇಜ್ ಹಾಕಿ ಆ ಇಲಾಖೆ ಯವರು ತಾಲೂಕಿನಲ್ಲಿ ಸಭೆ ಕರೆಯದೆ ಯುವಕ ಯುವತಿ ಮಂಡಳಿ ಯವರಿಗೆ ಸರಿಯಾಗಿ ತಿಳಿಸದೇ ಯಾವ ಮಾಧ್ಯಮ ದವರಿಗೂ ತಿಳಿಸದೆ, ಕೊನೆ ಪಕ್ಷ ತಾಲೂಕಿನಲ್ಲಿರುವ ಗ್ರಾಮ ಪಂಚಾಯತದವರಿಗಾದರೂ,. ತಿಳಿಸಬೇಕಾಗಿತ್ತು, ಯಾರಿಗೂ ತಿಳಿಸದೆ ಈ ದಸರಾ ಕ್ರೀಡಾಕೂಟವನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕೇವಲ ಕಾಟಾಚಾರಕ್ಕೆ ಈ ಕ್ರೀಡಾಕೂಟ ನಡೆಸಿ ಕೈ ತೊಳೆದುಕೊಂಡರೆ ಅದರ ಕೆಟ್ಟ ಹೆಸರು ತಾಲೂಕಿನ ಅಧಿಕಾರಿಗಳಿಗೆ ಬರುತ್ತದೆ.
ಆದ್ದರಿಂದ ಈ ಬಗ್ಗೆ ತಾಲೂಕು ಪಂಚಾಯತದ ಜವಾಬ್ದಾರಿ ಅಧಿಕಾರಿಗಳು ಹಳಿಯಾಳದಲ್ಲಿದ್ದು, ದಸರಾ ಕ್ರೀಡಾಕೂಟ ನಡೆಸುವ ಇಂಥವರನ್ನು ಎಳೆದು ತಾಲೂಕಿಗೆ ತರಬೇಕು ಇಂಥವರಿಂದಲೇ ತಾಲೂಕು ಹಿಂದುಳಿಯಲು ಕಾರಣವಾಗಿದೆ. ಮಾನ್ಯ ಶಾಸಕರು ಇಂಥವರಿಗೆ ಅವಕಾಶ ನೀಡಿ ತಾಲೂಕಿನ ಪ್ರತಿಭೆಗಳನ್ನು ಕಡೆಗಣಿಸಬಾರದು. ಹಿಂದೆ ವಿವಿಧ ಸ್ಪರ್ಧೆಗಳಲ್ಲಿ ತಾಲೂಕಿನ ಕ್ರೀಡಾ ಪ್ರತಿಭೆಗಳು , ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದು , ಇನ್ನೂ ಹಸಿರಾಗಿರುವಾಗಲೇ ದಸರಾ ಕ್ರೀಡಾ ಕೂಟವನ್ನು ಕಾಟಾಚಾರಕ್ಕೆ ಮಾಡಿರುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.
