ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಉದ್ಯಮಿ ಶ್ರೀನಿವಾಸ್ ನಾಯಕ್ ರವರನ್ನು ಟಾರ್ಗೇಟ್ ಮಾಡಿ ಇಬ್ಬರು ಧಾಳಿಕೋರರು ಗುಂಡು ಹಾರಿಸಿದ್ದ ಪ್ರಕರಣ ಗೋವಾ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಪೋಲಿಸರು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಿಂದ ಹಲವು ಪ್ರಮುಖ ಮಾಹಿತಿಗಳನ್ನು ಪೋಲಿಸರು ಕಲೆಹಾಕಿದ್ದಾರೆ.

ಉದ್ಯಮಿ ಶ್ರೀನಿವಾಸ್ ನಾಯಕ್ ರವರ ಮೇಲೆ ಗುಂಡಿನ ಧಾಳಿ ನಡೆಸಲು ಈ ಇಬ್ಬರು ಧಾಳಿಕೋರರು ಧಾಳಿಗೂ ಮೊದಲ ದಿನ ಪರ್ವರಿಯ ಮೆಜೆಸ್ಟಿಕ್ ಹೋಟೆಲ್ ಸುತ್ತಮುತ್ತಲಿನ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಾ ಸ್ಕೆಚ್ ಹಾಕಿದ್ದಾರೆ. ಧಾಳಿಗೂ ಮುನ್ನ ಇವರಿಬ್ಬರೂ ಆರೋಪಿಗಳು ಹೋಟೆಲ್ ಪರಿಸರದಲ್ಲಿ ಸುತ್ತಾಡಿದ ದೃಶ್ಯಗಳೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಧಾಳಿಕೋರರು ಧಾಳಿ ನಡೆಸಿ ಕೂಡಲೇ ಒಂದೊಂದು ದಿಕ್ಕಿಗೆ ಪ್ರತ್ಯೇಕವಾಗಿ ಪರಾರಿಯಾಗಿದ್ದಾರೆ. ಪೋಲಿಸರು ಕೂಡಲೇ ಇವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಎಲ್ಲಾ ನಾಕೆಗಳಲ್ಲಿ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಈ ಧಾಳಿಕೋರರ ಬಂಧನ ಸಾಧ್ಯವಾಗಿಲ್ಲ. ಪೋಲಿಸರು ಹಲವು ತಂಡಗಳನ್ನು ರಚಿಸಿದ್ದು ಹೊರ ರಾಜ್ಯಕ್ಕೂ ತೆರಳಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಶುಕ್ರವಾರ ಸಂಜೆ ಕ್ಯಾಸಿನೊ ಮೆಜೆಸ್ಟಿಕ್ ಪ್ರವೇಶದ್ವಾರದ ಬಳಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ನಾಯಕ್ ಮತ್ತು ಅವರ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಪಾಕಿರ್ಂಗ್ ಪ್ರದೇಶದ ಬಳಿ ಸುಮಾರು ಒಂದು ಗಂಟೆ ಕಾಲ ಕಾದು ಕುಳಿತಿದ್ದರು, ನಂತರ ನಾಯಕ್ ತಮ್ಮ ಕಾರಿನ ಬಳಿ ಬರುತ್ತಿದ್ದಂತೆಯೇ ಧಾಳಿಕೋರರು ಗುಂಡು ಹಾರಿಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಅವರು ಹತ್ತಿರದಿಂದ ಗುಂಡು ಹಾರಿಸಿದರು ಎಂದು ಹೇಳಲಾಗಿದ್ದು, ದಾಳಿಕೋರರು ಮೂರು ಸುತ್ತು ಗುಂಡು ಹಾರಿಸಿದರು ಮತ್ತು ಪ್ರತೀಕಾರವಾಗಿ ನಾಯಕ್ ಅವರ ಭದ್ರತಾ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿದರು. ಅದೃಷ್ಠವಶಾತ್ ನಾಯಕ್ ಮತ್ತು ಅವರ ಭದ್ರತಾ ಸಿಬ್ಬಂದಿ ದಾಳಿಯಿಂದ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಪರ್ವರಿಯ ಮೆಜೆಸ್ಟಿಕ್ ಹೋಟೆಲ್ ಇರುವುದು ಗೋವಾ ವಿಧಾನಸಭೆಯ ಸಮೀಪ. ಇಷ್ಟೇ ಅಲ್ಲದೆಯೇ ಪರ್ವರಿ ಪೋಲಿಸ್ ಠಾಣೆಯೂ ಸಮೀಪವಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಈರೀತಿ ಗುಂಡಿನ ಧಾಳಿ ನಡೆದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.