ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿಯಿಂದ ಗೋವಾಕ್ಕೆ ಮಾರಾಟಮಾಡಲು ತಂದಿದ್ದ 120 ಕಿಲೊ ಕನಿಷ್ಠ ದರ್ಜೆಯ ಮಿಠಾಯಿಯನ್ನು ಆಹಾಯ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಜಫ್ತಿ ಮಾಡಿರುವ ಮಿಠಾಯಿ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಇದನ್ನು ಅಧಿಕಾರಿಗಳು ನಷ್ಠಗೊಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಪಣಜಿ ಸಮೀಪದ ತಾಲಿಗಾಂವ ಪರಿಸರದಲ್ಲಿ ಸಂಶಯಾಸ್ಪದವಾಗಿ ಓಡಾಟ ನಡೆಸುತ್ತಿದ್ದ ಖಾಸಗಿ ಎರ್ಟಿಗಾ ಕಾರು (ಕೆಎ-22, ಎಂಬಿ-2137) ನ್ನು ಆಹಾರ ಇಲಾಖೆಯ ಅಧಿಕಾರಿಗಳು ತಡೆದು ನಿಲ್ಲಿಸಿದರು. ಈ ಕಾರಿನ ಒಳಗೆ ತಪಾಸಣೆ ನಡೆಸಲಾಗಿ ಬೃಹತ್ ಪ್ರಮಾಣದಲ್ಲಿ ವಿವಿಧ ಪ್ರಕಾರದ ಮಿಠಾಯಿ (ಸ್ವೀಟ್ಸ) ಪತ್ತೆಯಾಗಿದೆ. ಇದನ್ನು ಗೋವಾದಲ್ಲಿ ಮಿಠಾಯಿ ಅಂಗಡಿಗಳಿಗೆ ಪೂರೈಕೆ ಮಾಡಲು ತಂದಿದ್ದರು.

ಆತಂಕಕಾರಿ ಸಂಗತಿಯೆಂದರೆ ಈ ಮಿಠಾಯಿ ತಯಾರಿಸಲು ಹಾಗೂ ಪೂರೈಕೆ ಮಾಡಲು ಎಫ್ ಎಸ್ ಎಸ್ ಎ ಐ ಲೈಸನ್ಸ ಹೊಂದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಯಾವುದೇ ಪರವಾಗಿಯಿಲ್ಲದೆಯೇ , ಸುರಕ್ಷತಾ ನಿಯವನ್ನೂ ಪಾಲಿಸದೆಯೇ ಅನಧೀಕೃತವಾಗಿ ಮಿಠಾಯಿಯನ್ನು ಬೆಳಗಾವಿಯಿಂದ ಗೋವಾಕ್ಕೆ ತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಷ್ಟಿಒಂದು ಪ್ರಮಾಣದಲ್ಲಿ ಮಿಠಾಯಿಯನ್ನು ಬೆಳಗಾವಿಯಿಂದ ಗೋವಾಕ್ಕೆ ತರಲಾಗಿತ್ತು. ಇದರಿಂದಾಗಿ ಬೆಳಗಾವಿಯಲ್ಲಿ ತನಿಖೆ ನಡೆಸಲು ಈ ಪ್ರಕರಣವನ್ನು ಬೆಳಗಾವಿ ಆಹಾರ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಅನಧೀಕೃತವಾಗಿ ಮಿಠಾಯಿಯನ್ನು ಕಾರಿನಲ್ಲಿ ಗೋವಾಕ್ಕೆ ತರಲಾಗುತ್ತಿರುವುದರಿಂದ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಆರ್ ಟಿ ಒ ಅಧಿಕಾರಿಗಳಿಗೂ ಗೋವಾ ಆಹಾರ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.