Banner Ad

ತಿಳಾರಿ ನೀರು ಬೆಳಗಾವಿಗೆ…?

ಸುದ್ಧಿಕನ್ನಡ ವಾರ್ತೆ
ಬೆಳಗಾವಿ: ಕರ್ನಾಟಕದ ಬೆಳಗಾವಿಯ ಜನರು ತಮ್ಮ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಿಕೊಳ್ಳಳು ತಿಳಾರಿ ನದಿಯತ್ತ ಮುಖ ಮಾಡಿದ್ದಾರೆ. ತಿಳಾರಿ ನದಿಯಿಂದ ಹೆಚ್ಚುವರಿ ನೀರನ್ನು ರಕಸ್ಕೋಪ್ ಜಲಾಶಯದ ಮೂಲಕ ಬೆಳಗಾವಿ ನಗರಕ್ಕೆ ತಿರುಗಿಸಿಕೊಳ್ಳುವ ಪ್ರಸ್ತಾವನೆಯನ್ನು ಚರ್ಚಿಸಲು ಮುಂದಿನ ವಾರ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಯಲಿದೆ.

Banner Ad

 

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ರವರು ಮಾಜಿ ಕಾರ್ಪೊರೇಟರ್ ಗಳ ನಿಯೋಗಕ್ಕೆ ಈ ವಿಷಯವನ್ನು ಸಭೆಯಲ್ಲಿ ಚರ್ಚಿಸುವ ಭರವಸೆ ನೀಡಿದ್ದಾರೆ. ಮಾಜಿ ಕಾರ್ಪೊರೇಟರ್ ಶಿವಾಜಿ ಸುಂಠಣಕರ್ ಒಳಗೊಂಡ ಮಾಜಿ ಕಾರ್ಪೋರೇಟರ್ ಗಳ ನಿಯೋಗ ಜಾರಕಿಹೊಳಿ ರವರನ್ನು ಭೇಟಿ ಮಾಡಿ ತಿಳಾರಿ ನೀರಿನ ಯೋಜನೆ ಕುರಿತು ಚರ್ಚೆ ನಡೆಸಿದರು.

 

ಈ ಯೋಜನೆಯು ಬೆಳಗಾವಿಯ ನೀರು ಸರಬರಾಜಿನ ವ್ಯವಸ್ಥೆಯನ್ನು ಬಲಪಡಿಸಲು ದೀರ್ಘಕಾಲಿನ ಕ್ರಮವೆಂದು ಪರಿಗಣಿಸಲಾಗಿದೆ. ತಿಳಾರಿ ಹೆಚ್ಚುವರಿ ನೀರನ್ನು ರಾಕಸ್ಕೋಪ್ ಜಲಾಶಯದ ಮೂಲಕ ನಗರಕ್ಕೆ ತರಲು ಸಾಧ್ಯವಾದರೆ ಅದು ಬೆಳಗಾವಿಯ ಕುಡಿಯುವ ನೀರಿನ ಅವಶ್ಯಕತೆಗಳಿಗೆ ಪರಿಹಾರ ನೀಡುತ್ತದೆ ಎಂದೇ ಹೇಳಲಾಗುತ್ತಿದೆ.

Banner Ad