ಸುದ್ದಿ ಕನ್ನಡ ವಾರ್ತೆ

ಹಳಿಯಾಳ ಕ್ಷೇತ್ರಕ್ಕೆ ಜೀವನಾಡಿ ಯಂತಿದ್ದ ಶಾಸಕ ಆರ್.ವಿ ದೇಶಪಾಂಡೆ ಅವರಿಗೆ ಮಂತ್ರಿ ಸ್ಥಾನ ನೀಡದೆ ಕೇಂದ್ರದ ಕಾಂಗ್ರೆಸ್ ಹೈ ಕಮಾಂಡ್ ಅನ್ಯಾಯ ಮಾಡಿದೆ. ಈ ಅನ್ಯಾಯವನ್ನು ಖಂಡಿಸಲು ಹಳಿಯಾಳ , ದಾಂಡೇಲಿ ಮತ್ತು ಜೊಯಿಡಾ ಕಾಂಗ್ರೆಸ್ ಘಟಕಗಳು ಹೈ ಕಮಾಂಡ್ ಧೋರಣೆ ವಿರೋಧಿಸಿ ರಾಜೀನಾಮೆ ಕೊಟ್ಟು ಪ್ರತಿಭಟನೆ ತೋರಿಸುವರೆ ಎಂದು ಮತದಾರರು ಕೇಳುತ್ತಿದ್ದಾರೆ.

 

ಕಳೆದ 55 ವರ್ಷಗಳಿಂದ ರಾಜಕೀಯದ ವಿವಿಧ ಮಜಲುಗಳನ್ನು ನೋಡಿದ ಆರ್.ವಿ ದೇಶಪಾಂಡೆ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದಾರೆ. ಒಂದು ಕಾಲದಲ್ಲಿ ಜೊಯಿಡಾ ತಾಲೂಕು ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿದ್ದರೂ, ಹಳಿಯಾಳ ಕ್ಷೇತ್ರದ ಆರ್.ವಿ ದೇಶಪಾಂಡೆ ತಮ್ಮ ಕ್ಷೇತ್ರದ ಪಕ್ಕದ ತಾಲೂಕನ್ನು ದತ್ತಕ ಪಡೆದು ಕೆಲಸ ಮಾಡಿದ್ದಾರೆ. ಅವರಿಗೆ ಆಗ ದಿ.ವಿಲಾಸ್ ನಾಯ್ಕ್ ರವರು ಸಹಕಾರ ನೀಡಿದ್ದರು.ಇದನ್ನು ಮತದಾರರು ಸ್ಮರಿಸಿದ್ದಾರೆ.

 

ಜೊಯಿಡಾ ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ಅಭಿವೃದ್ಧಿಗೆ ದುಡಿದು ಈಗ 9 ನೇ ಬಾರಿ ಗೆದ್ದಾಗಲೂ ಕಾಂಗ್ರೆಸ್ ಹೈ ಕಮಾಂಡ್ ದೇಶಪಾಂಡೆ ಅವರನ್ನು ನಿರ್ಲಕ್ಷಿಸಿದ್ದು ಅವರ ಅಪಾರ ಬೆಂಬಲಿಗರಿಗೆ ನಿರಾಶೆ ಆಗಿದೆ. 9 ಬಾರಿ ಗೆಲ್ಲುವುದು ಸುಲಭವಲ್ಲ. ಈಗಿನ ಸ್ಥಿತಿಯಲ್ಲಿ ಒಂದು ಬಾರಿ ಗೆಲ್ಲುವುದು ಎಷ್ಟು ಕಷ್ಟ ಎನ್ನುವುದು ಹೈ ಕಮಾಂಡ್ ಗೆ ತಿಳಿಯದ ವಿಷಯವಲ್ಲ. ಆದರೂ ದೇಶಪಾಂಡೆ ಅವರನ್ನು ಮಂತ್ರಿ ಮಾಡದೆ ಹೈ ಕಮಾಂಡ್ ತಪ್ಪು ಮಾಡಿದೆ ಎಂದು ಕ್ಷೇತ್ರದ ಜನತೆ ದೂರಿದ್ದಾರೆ.

ಜನರ ಭಾವನೆಗಳಿಗೆ ಹಳಿಯಾಳ ದಾಂಡೇಲಿ ಮತ್ತು ಜೊಯಿಡಾ ದ ತಾಲೂಕಾ ಕಾಂಗ್ರೆಸ್ ಕಮಿಟಿ ಅವರು ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬರುವ ವಿವಿಧ ಚುನಾವಣೆಗಳನ್ನು ಎದುರಿಸಿ ಜನರನ್ನು ಸಮಾಧಾನ ಪಡಿಸುವುದು ಕಷ್ಟಕರವಾಗಬಹುದು ಹಾಗಾಗಿ ಮತದಾರರ ಮಾತಿಗೆ ಹೇಗೆ ಮನ್ನಣೆ ನೀಡಬೇಕೆಂದು ನಿರ್ಧರಿಸಿದರೆ ಉತ್ತಮವೇನೋ,

ಸರಕಾರದ ಮೊದಲನೇ ಹಂತದಲ್ಲಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡದಿದ್ದಾಗ ಎರಡನೇ ಅವಧಿಗೆ ನೀಡಬಹುದು ಎಂದು ಜನತೆ ನಂಬಿಕೊಂಡಿದ್ದರು. ಹೈ ಕಮಾಂಡ್ನ ಇಂದಿನ ನಿರ್ಧಾರ ಕ್ಷೇತ್ರದ ಜನತೆಯನ್ನು ಬೇಸರಕ್ಕೆ ದೂಡಿದೆ. ಹಾಗಾಗಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ದೊಡ್ಡ ಹಾನಿಯಾದಂತಾಗಿದೆ ಜೊತೆಗೆ ಗೋವಾ ರಾಜ್ಯ ಕ್ಕಿಂತಲೂ ದೊಡ್ಡದಾದ ಜಿಲ್ಲೆಗೆ,ಸಿಗಬೇಕಾದ ಮಂತ್ರಿಗಳ ಸ್ಥಾನ ಮಾನ ಕೂಡ ನೀಡದ ಹೈಕಮಾಂಡ್ ಗೆ ಯಾರು ಬುದ್ದಿ ಹೇಳಬೇಕು ಮತದಾರರೇ?….