ಸುದ್ದಿ ಕನ್ನಡ ವಾರ್ತೆ
ಜೊಯಿಡಾ ದ ಗಣೇಶ ಗುಡಿಯಲ್ಲಿ e ಚಾರ್ಜಿಂಗ್ ಕೇಂದ್ರ ಆರಂಭವಾಗಿದೆ. ಇದರಿಂದ ವಿದ್ಯುತ್ ನಿಂದ ಚಲಾಯಿಸುವ ಬೈಕ್ ಕಾರು , ರಿಕ್ಷಾ ಗಳನ್ನು ಸುಲಭವಾಗಿ ಚಾರ್ಜ್ ಮಾಡಿಸಿ ಕೊಳ್ಳಬಹುದಾಗಿದೆ.ಪ್ರವಾಸಿಗರಿಗೆ ಇದು ಅನುಕೂಲಕರ ವಾಗಿದೆ.
ತಾಲೂಕಿನ ಗಣೇಶ ಗುಡಿಯ ಇಳವಾ ದಲ್ಲಿರುವ ವಿಸ್ಲಿಂಗ್ ವುಡ್ ರೆಸಾರ್ಟ್ ತುಂಬಾ ಖ್ಯಾತಿ ಹೊಂದಿದೆ. ಹಿಂದುಳಿದ ತಾಲೂಕು ಜೊಯಿಡಾ ಆದರೂ ಈ ಸುಂದರ ವಿಸ್ಲಿಂಗ್ ವುಡ್ ರೆಸಾರ್ಟ್ ವಿಶ್ವ ವಿಖ್ಯಾತಿಯಾಗಿದೆ. ರಾಜ್ಯದ , ದೇಶದ , ವಿದೇಶದ ಜನರು ಅದರಲ್ಲೂ ಗಣ್ಯ ರಾಜಕಾರಣಿಗಳು ಈ 5 ಸ್ಟಾರ್ ಗೆ ಬರುತ್ತಾರೆ. ಇಲ್ಲಿನ ಪರಿಸರ ದೊಂದಿಗೆ ಬೆರೆತು ಸಂತುಷ್ಟರಾಗುತ್ತಾರೆ.
ಬರುವವರಲ್ಲಿ ಪ್ರವಾಸಿಗರು ಎಲೆಕ್ಟ್ರಿಕ್ ವಾಹನ ತಂದರೆ ಅನುಕೂಲವಾಗಲಿ ಎಂದು ಮಾಲೀಕರಾದ ಜಾದವ್ ಅವರು e ಚಾರ್ಜಿಂಗ್ ಮಷೀನ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.
ಸಮೀಪದ ತಾಲೂಕು ದಾಂಡೇಲಿ ಅಥವಾ ಪಕ್ಕದ ರಾಮನಗರ ಜೊಯಿಡಾ ಎಲ್ಲೂ ಕೂಡ e ಚಾರ್ಜಿಂಗ್ ಇಲ್ಲದ ಕಾರಣ ಇದರ ದೂರದ ಬೆಳಗಾವಿ. ಗೋವಾ ಹುಬ್ಬಳ್ಳಿ ಧಾರವಾಡ ಗಳಿಂದ ಮತ್ತು ರಾಜ್ಯದ ಬೇರೆ ಬೇರೆ ಸ್ಥಳ ಗಳಿಂದ ಬರುವ ಪ್ರವಾಸಿಗರಿಗೆ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಒಟ್ಟಾರೆ ತಾಲೂಕಿನ ಅಣಶಿ ಯಿಂದ ಅನಮೋಡ ವರೆಗಿನ ಪ್ರವಾಸಿಗರಿಗೆ ಮಧ್ಯವರ್ತಿ ಸ್ಥಳ ಗಣೇಶ ಗುಡಿಯಲ್ಲಿ e ಚಾರ್ಜಿಂಗ್ ಸೌಲಭ್ಯ ದೊರೆತಂತಾಗಿದೆ.
