ಸುದ್ದಿ ಕನ್ನಡ ವಾರ್ತೆ
ಗೋವಾ:ರಾಜ್ಯದ ಪ್ರತಿಭಾವಂತೆ ಸಮೀಕ್ಷಾ ಸಂಜಯ ಹಳದಂಕರ್ ಅವರು ಜುಲೈ 20ರಂದು ನಡೆದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಸೂಪರ್ ಗ್ಲೋಬಲ್ ಇಂಡಿಯಾ 2026’ ಪ್ರಶಸ್ತಿಯನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳ ನಡುವೆ ಸಮೀಕ್ಷಾ ಅವರು ತಮ್ಮ ಆತ್ಮವಿಶ್ವಾಸ, ಪ್ರತಿಭೆ ಹಾಗೂ ವೇದಿಕೆಯ ಮೇಲಿನ ಅದ್ಭುತ ಪ್ರದರ್ಶನದ ಮೂಲಕ ತೀರ್ಪುಗಾರರ ಮೆಚ್ಚುಗೆ ಗಳಿಸಿದರು. ಮುಖ್ಯ ಕಿರೀಟದ ಜೊತೆಗೆ ‘India’s Best Catwalk’ ಹಾಗೂ ‘Best Talent’ ಎಂಬ ಎರಡು ವಿಶೇಷ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಸಮೀಕ್ಷಾ ಅವರ ಈ ಸಾಧನೆ ಗೋವಾ ರಾಜ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದ್ದು, ರಾಜ್ಯದ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
