ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ತಾಲೂಕಿನ ಬೇಳಂಬಾರ ಕಡಲ ತೀರದ ಬಂಡೆಯೊಂದರ ಮೇಲೆ ಸುಮಾರು 8 ಅಡಿ ಉದ್ದದ ಡಾಲ್ಫಿನ್ ಮೃತದೇಹ ಪತ್ತೆಯಾಗಿದೆ.
ಸಮುದ್ರ ತೀರದಲ್ಲಿ ಓಡಾಡುತ್ತಿದ್ದ ಮೀನುಗಾರರು ದೃಶ್ಯವನ್ನು ಕಂಡು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಾಗರ ಜೀವಿ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ದೇಹ ಸಂಪೂರ್ಣ ಕೊಳೆತು ಹೋಗಿರುವುದರಿಂದ ಡಾಲ್ಫಿನ್ ಮೃತಪಟ್ಟು ಹಲವು ದಿನಗಳೇ ಕಳೆದಿರಬಹುದು ಎಂದು ಅಂದಾಜಿಸಿದ್ದಾರೆ.
ಇದು ‘ಓಶಿಯನ್ ಹಂಪ್‌ಬ್ಯಾಕ್’ಜಾತಿಗೆ ಸೇರಿದ ಡಾಲ್ಫಿನ್ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಈ ಡಾಲ್ಫಿನ್ ಮೃತಪಟ್ಟಿರಬಹುದು ಅಥವಾ ತೀವ್ರ ಅನಾರೋಗ್ಯದಿಂದ ಸತ್ತು ತೇಲಿ ಬಂದು ಇಲ್ಲಿನ ಬಂಡೆಗಳ ನಡುವೆ ಸಿಲುಕಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
