ಸುದ್ದಿ ಕನ್ನಡ ವಾರ್ತೆ

2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿ ನೋಂದಾವಣೆಯ ಕುರಿತು
ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು IndusInd General Insurance (Formerly Reliance General Inusrance Company Limited) ಸಂಸ್ಥೆ ಆಗಿರುತ್ತದೆ. 2026 ಮುಂಗಾರು ಹಂಗಾಮಿಗೆ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ದಿ:31-07-2026 ಕೊನೆಯ ದಿನವಾಗಿದ್ದು, ತಾಲೂಕಿನಲ್ಲಿ ಅಡಿಕೆ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿರುತ್ತದೆ. ವಿಮಾ ಚಂದಾದಾರರಾಗಲು ರೈತರು FIDಯನ್ನು ಹೊಂದುವುದು ಕಡ್ಡಾಯವಾಗಿದ್ದು, ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್‌ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿ ಅಂತಿಮ ದಿನಾಂಕದ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಬೆಳ ಸಾಲ ಪಡೆಯುವ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರಿಗೆ ನೊಂದಣಿ ಅಂತಿಮ ದಿನಾಂಕದ 7 ದಿನಗಳ ಒಳಗಾಗಿ ಲಿಖಿತವಾಗಿ ಮಾಹಿತಿ ನೀಡಬೇಕಾಗುತ್ತದೆ.

ಅಡಿಕೆ ಬೆಳೆಗೆ ಪ್ರತಿ ಎಕರೆಗೆ ಒಟ್ಟು ವಿಮಾ ಮೊತ್ತ ರೂ. 51,200, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ. 2560, ಕಾಳು ಮೆಣಸು ಬೆಳೆಗೆ ಪ್ರತಿ ಎಕರೆಗೆ ರೂ. 18,800 ವಿಮಾ ಮೊತ್ತ, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ. 940. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಕಛೇರಿ ಅಥವಾ ಹತ್ತಿರದ ಸಹಕಾರಿ ಸಂಘ, ಬೆಳೆಸಾಲ ಕೊಟ್ಟ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ.ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ