ಸುದ್ಧಿಕನ್ನಡ
ಪಣಜಿ: ಗೋವಾದ ಸತ್ತರಿ ತಾಲೂಕಿನ ಸುರ್ಲಾ ಗ್ರಾಮಪಂಚಾಯತ ಬಳಿಯ ಮಹಾದಾಯಿ ಅಭಯಾರಣ್ಯ ಪ್ರದೇಶದ ಬಾರಾಜಣ ಜಲಪಾತದಲ್ಲಿ ಭಾನುವಾರ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ಗೋವಾ ಪ್ರವಾಸಕ್ಕೆ ಬಂದಿದ್ದ ಬೆಳಗಾವಿಯ ಯುವಕ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಈ ಜಲಪಾತ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಭಂಧ ಹೇರಿದ್ದರೂ ಕೂಡ ಈ ಸೂಚನೆ ನಿರ್ಲಕ್ಷಿಸಿ ಜಲಪಾತಕ್ಕೆ ತೆರಳಿ ಈ ದುರ್ಘಟನೆ ಸಂಭವಿಸಿದೆ.A young man from Belgaum, who had come on a trip to Goa, fell into the waterfall and died.
ಬೆಳಗಾವಿಯಿಂದ ತನ್ನ ಸ್ನೇಹಿತರೊಂದಿಗೆ 20 ವರ್ಷದ ಯುವಕ ಆದಿತ್ಯ ದೀಪಕ ಕುಮಾರ್ ಸತ್ಪತಿ ಜಲಪಾತದಲ್ಲಿ ನೀರಿಗೆ ಇಳಿದ ಕೂಡಲೇ ಸಮತೋಲನ ಕಳೆದುಕೊಂಡು ಆಳವಾದ ಕಂದಕದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈತನನ್ನು ರಕ್ಷಿಸಲು ಈತನ ಸ್ನೇಹಿತರು ಅದೆಷ್ಟೇ ಪ್ರಯತ್ನಿಸಿದರೂ ಕೂಡ ಭಾರಿ ಪ್ರಮಾಣದ ನೀರಿನ ಹರಿವಿನಿಂದಾಗಿ ಈತನ ರಕ್ಷಣೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತ ಪ್ರವೇಶಕ್ಕೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದ್ದರೂ ಕೂಡ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಸೂಚನೆಯನ್ನು ನಿರ್ಲಕ್ಷಿಸಿ ಭಾನುವಾರ ಇಲ್ಲಿಗೆ 150 ರಿಂದ 200 ಜನ ಪ್ರವಾಸಿಗರು ಆಗಮಿಸಿದ್ದರು ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಇದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.
ಗೋವಾದ ವಾಳಪೈ ಅಗ್ನಿಶಾಮಕ ದಳ, ಗೋವಾ ಪೋಲಿಸ್, ಬೆಳಗಾವಿ ನೌಕಾಪಡೆ ತರಬೇತಿ ಪಡೆದ ಸಿಬ್ಬಂಧಿ ಭಾನುವಾರ ಸಂಜೆ ಯುವಕ ಆದಿತ್ಯನಿಗಾಗಿ ಶೋಧ ಕಾರ್ಯ ನಡೆಸಿದರೂ ಕತ್ತೆಯಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಷ್ಟೇ ಅಲ್ಕದೆಯೇ ಭಾರಿ ನೀರಿನ ಹರಿವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದಿತ್ಯನ ತಂದೆ ನಿವೃತ್ತ ನೌಕಾ ಅಧಿಕಾರಿಯಾಗಿದ್ದು ಅವರ ಮದುವೆಯ 15 ವರ್ಷಗಳ ಕಾಯುವಿಕೆಯ ನಂತರ ಆದಿತ್ಯ ಜನಿಸಿದ್ದ ಎನ್ನಲಾಗಿದೆ. ಆದಿತ್ಯನ ಅಕಾಲಿಕ ಮರಣವು ಅವರ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ನಂತರ ಸೋಮವಾರ ಬೆಳಿಗ್ಗೆ ಕಾರ್ಯಚರಣೆ ನಡೆಸಿ ಈ ಯುವಕನ ಶವವನ್ನು ಪತ್ತೆಹಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
