ಸುದ್ದಿ ಕನ್ನಡ ವಾರ್ತೆ
ಕಾರವಾರ: ಕಾರವಾರ ಮತ್ತು ಮಡಗಾಂವ್ ವಿಶೇಷ
ರೈಲನ್ನು ಇನ್ನು ಮುಂದೆ ಖಾಯಂ ಸೇವೆಯನ್ನಾಗಿ ಪರಿವರ್ತಿಸಲು ರೇಲ್ವೆ ಮಂಡಳಿ ಆದೇಶ ಹೊರಡಿಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಹಿಂದೆ ವಿಶೇಷ ರೈಲು ಸಂಖ್ಯೆ 01595/01596 ಆಗಿ ಸಂಚರಿಸುತ್ತಿದ್ದ ಈ ಸೇವೆಯನ್ನು, ಇನ್ನು ಮುಂದೆ ಹೊಸದಾಗಿ ರೈಲು ಸಂಖ್ಯೆ 10109/10110 ಮಡಗಾಂವ್ – ಕಾರವಾರ – ಮಡಗಾಂವ್ ಎಕ್ಸ್ಪ್ರೆಸ್ ರೈಲ್ ನ್ನಾಗಿ ಪ್ರತಿದಿನ ನಿಯಮಿತವಾಗಿ ಓಡಿಸಲಾಗುತ್ತದೆ.
ಹೊಸ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 10110 ಕಾರವಾರ – ಮಡಗಾಂವ್ ಎಕ್ಸ್ಪ್ರೆಸ್ ಪ್ರತಿದಿನ ಬೆಳಿಗ್ಗೆ 8:30 ಕ್ಕೆ ಕಾರವಾರದಿಂದ ಹೊರಟು, ಅದೇ ದಿನ ಬೆಳಿಗ್ಗೆ 09:45 ಕ್ಕೆ ಮಡಗಾಂವ್ ತಲುಪಲಿದೆ. ಹಾಗೆಯೇ ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 10109 ಮಡಗಾಂವ್ – ಕಾರವಾರ ಎಕ್ಸ್ಪ್ರೆಸ್ ಪ್ರತಿದಿನ ಸಂಜೆ 04:30 ಕ್ಕೆ ಮಡಗಾಂವ್ನಿಂದ ಹೊರಟು, ಸಂಜೆ 05:45 ಕ್ಕೆ ಕಾರವಾರವನ್ನು ತಲುಪಲಿದೆ. ಈ ಎರಡು ಪ್ರಮುಖ ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿಗೆ ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆಯನ್ನು ಕಲ್ಪಿಸಲಾಗಿದೆ.
ಈ ರೈಲು ಎಸಿ, ಸ್ವೀಪರ್ ಮತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡ ಒಟ್ಟು 14 ಬೋಗಿಗಳೊಂದಿಗೆ ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.
