ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಬಾಂಬೋಲಿಯ ನಿಯಾಜ್ ರೆಸ್ಟೋರೆಂಟ್ ಬಳಿ ಹೆದ್ದಾರಿ ತಿರುವಿನಲ್ಲಿ ಸೋಮವಾರ ಬೆಳಗಿನ ಜಾವ ಕಂಟೇನರ್ ಪಲ್ಟಿಯಾಗಿದೆ. ಈ ಅಪಘಾತದಿಂದಾಗಿ ಬಾಂಬೋಲಿಯಿಂದ ಪಣಜಿ ಕಡೆಗೆ ಹೋಗುವ ವಾಹನಗಳ ಸಂಚಾರ ಸಂಪೂರ್ಣವಾಗಿ ಸುಮಾರು ಎಂಟು ತಾಸುಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಇದರಿಂದಾಗಿ ಬೆಳಿಗ್ಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಮತ್ತು ಇತರ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರ ಪೆÇಲೀಸ್ ವರಿಷ್ಠಾಧಿಕಾರಿ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಬಾಂಬೋಲಿಯಿಂದ ಪಣಜಿಗೆ ಹೋಗುವ ವಾಹನಗಳನ್ನು ಸಾಂತಾ ಕ್ರೂಜ್ನಲ್ಲಿರುವ ನೆಕ್ಸಾ ಶೋರೂಂ ಮೂಲಕ ತಿರುಗಿಸಲಾಗಿತ್ತು. ಅಲ್ಲದೆ, ದಕ್ಷಿಣ ಗೋವಾದಿಂದ ಪಣಜಿ ಅಥವಾ ಉತ್ತರ ಗೋವಾ ಕಡೆಗೆ ಬರುವ ಎಲ್ಲಾ ಭಾರೀ ವಾಹನಗಳನ್ನು ಬೋರಿ-ಪೊಂಡಾ ಮಾರ್ಗವನ್ನು ಬಳಸುವಂತೆ ಸಂಚಾರ ಪೆÇಲೀಸರು ಸೂಚಿಸಿದ್ದರು. ಅಪಘಾತವಾದ ಕಂಟೇನರ್ ಅನ್ನು ತೆಗೆದುಹಾಕಿ ರಸ್ತೆಯನ್ನು ತೆರವುಗೊಳಿಸಲಾಗಿದೆ.
ಗೋವಾದಲ್ಲಿ ಭಾನುವಾರ ರಾತ್ರಿ ಬಿದ್ದ ಮುಂಗಾರು ಪೂರ್ವ ಮಳೆಯಿಂದಾಗಿ, ಅನೇಕ ಸ್ಥಳಗಳಲ್ಲಿ ರಸ್ತೆಗಳು ಜಾರುವಂತಾಗಿದೆ. ಈ ಹಿನ್ನೆಲೆಯಲ್ಲಿ, ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹೆಚ್ಚಿನ ಜಾಗರೂಕರಾಗಿರಲು ಆಡಳಿತವು ಚಾಲಕರಿಗೆ ಮನವಿ ಮಾಡಿದೆ.
