ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ : ವಾಗ್ದೇವಿ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ತನ್ನ ಸಾಧನೆಯನ್ನ ಮುಂದುವರೆಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ
ರ‍್ಯಾಂಕ್ ಪಡೆಯುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಯಾವತ್ತಿಗೂ ನಾವೇ ನಂಬರ್ ಒನ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ವಾಗ್ದೇವಿ ಶಿಕ್ಷಣ ಸಂಸ್ಥೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಅನಘ ಕೆ ಎಸ್ ಈ ಮೊದಲು 624/625 ಅಂಕ ಪಡೆದಿದ್ದರು. ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದರು. ಆ ನಂತರ ಮರುಮೌಲ್ಯಮಾಪನದಲ್ಲಿ 100 ಅಂಕ ಪಡೆಯುವ ಮೂಲಕ 625/625 ಅಂಕ ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು ತೀರ್ಥಹಳ್ಳಿಗೆ ಹೆಮ್ಮೆ ತಂದಿದ್ದಾರೆ. ಕೋಣಂದೂರಿನ ಮೇಲಿನ ಕಡಗೋಡುವಿನ ಮಂಗಳ ಮತ್ತು ಶಿವಕುಮಾರ ದಂಪತಿಗಳ ಪುತ್ರಿ ಆಗಿದ್ದಾರೆ.
ಅನಘಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ
