ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ವ್ಯಾಪ್ತಿಯಲ್ಲಿ ಏಪ್ರಿಲ್ 21 ರಂದು ಅತಿ ದೊಡ್ಡ ರಾಬರಿ ಪ್ರಕರಣವೊಂದು ಜರುಗಿತ್ತು.
ಲಕ್ಕುಂದ ಗ್ರಾಮದ ಮನೆಯೊಂದರಲ್ಲಿ ಹಾಡಹಗಲೇ ದರೋಡೆ ಸಂಭವಿಸಿ ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದರು . ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ನಿಖಿಲ್.ಬಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಕಾರಿಯಪ್ಪ.ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ. ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಮಾಳೂರು ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್.ಎಲ್ ರವರ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಸದರಿ ತಂಡದಲ್ಲಿ ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವನಗೌಡ, ಮಾಳೂರು ಪಿ.ಐ.ಎಸ್ ಸುನಿಲ್, ಎ.ಎಸ್.ಐ ಉಮೇಶ್ ನಾಯ್ಕ.ಸಿ ಎ.ಎಸ್.ಐ ರಂಗನಾಥ್ ಸಿಬ್ಬಂದಿಯವರಾದ ಅಂಗೇಗೌಡ, ಸುರಕ್ಷೀತ್, ಕಿರಣ್ ಕುಮಾರ, ಕುಮಾರ್ ಜೋಸೆಫ್ ಮ್ಯಾಥ್ಯ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ.ಓ. ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ.ಹೆಚ್.ಸಿ. ಅರವಿಂದ, ಚಾಲಕರಾದ ಅವಿನಾಶ, ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ ರವರ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು. ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಮತ್ತು ಮಾಲು ಪತ್ತೆ ಮಾಡಿರುತ್ತಾರೆ.
ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ವಿವರ: 1) 70 ಗ್ರಾಂ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು 2) 56 ಗ್ರಾಂ ಬೆಳ್ಳ ವಸ್ತುಗಳ, ಅಂದಾಜು ಮೌಲ್ಯ 16,700/-ರೂಗಳು 3) ಕೃತ್ಯಕ್ಕೆ ಬಳಸಿದ KA66E7415 Access ಬಿಳಿ ಬಣ್ಣದ ಸ್ಕೂಟ ಅಂದಾಜು ಮೌಲ್ಯ 50,000/- ರೂಗಳು 4) ಕೃತ್ಯಕ್ಕೆ ಬಳಸಿದ KA14EU3566 Honda Activa ಬೂದು ಬಣ್ಣದ ಸ್ಕೂಟಿ, ಅಂದಾಜು ಮೌಲ್ಯ 50,000/- dis ಒಟ್ಟು 11 ಲಕ್ಷ 96700/- ರೂಗಳ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ದಸ್ತಗಿರಿ ಮಾಡಿದ ಆರೋಪಿಗಳು ಎ1. ಭರತ್.ವೈ @ ಭಟ್ಟ ತಂದೆ ಯಶವಂತರಾವ್. 25 ವರ್ಷ, ಭದ್ರಾವತಿ (ತಾ), 2) ಅಶೋಕ ತಂದೆ ಪೆರುಮಾಳ್, 28 ವರ್ಷ, ಪೆಂಟಿಂಗ್ ಕೆಲಸ , ಶಿವಮೊಗ್ಗ 3) ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್ ತಂದೆ ಹಸನಬ್ಬ ಬ್ಯಾರಿ, 24 ವರ್ಷ, ಭದ್ರಾವತಿ (ತಾ) 4) ಪಾರ್ತಿಪ್ ತಂದೆ ದೊರೆಸ್ವಾಮಿ, 25 ವರ್ಷ, ಚಾಲಕ ವೃತ್ತಿ, ಮೇಲಿನಕುರುವಳ್ಳಿ, ತೀರ್ಥಹಳ್ಳಿ (ತಾ)
