ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ರಾತ್ರಿ ಸುರಿದ ಭಾರಿ ಗುಡುಗು ಸಿಡಿಲು ಮಳೆಯಿಂದ ನುಜ್ಜಿ – ಅಣಶಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಸದಾಶಿವಗಡ – ಔರಾಧ ಹೆದ್ದಾರಿ ಇದಾಗಿದ್ದು ರಸ್ತೆಯ ಎರಡು ಬದಿಯಲ್ಲಿ ಎತ್ತರವಾಗಿ ಗಟಾರದ ಮಣ್ಣು ಹಾಕಿದ ಕಾರಣ ರಸ್ತೆಯಲ್ಲಿ ನೀರು ತುಂಬುವಂತಾಗಿದೆ.
ಸ್ಥಳೀಯ ಗ್ರಾಮಸ್ಥರು ರಸ್ತೆಯಲ್ಲಿನ ನೀರಿಗೆ ಕಾಲುವೆ ತೆಗೆದು ಹೋಗುವಂತೆ ಮಾಡಿದ್ದಾರೆ.

ಲೋಕೋಪಯೋಗಿ ಇಲಾಕೆಯಿಂದ ತಾಲೂಕಿನಲ್ಲಿ ಆಮೆಗತಿಯ ಕಾಮಗಾರಿ ನಡೆಯುತ್ತಿದ್ದು, ಇಷ್ಟು ದಿನ‌ಬೇಸಿಗೆಯಲ್ಲಿ ಎಲ್ಲಾ ಕಾಮಗಾರಿ‌ ಮಾಡಿ ಮುಗಿಸದೇ ಈಗ ಮಳೆಗಾಲಪ್ರಾರಂಭದಲ್ಲಿ ತಾಲೂಕಿನ ಎಲ್ಲಾ ಕಡೆಗಳಲ್ಲಿ ಕಾಮಗಾರಿ ಆರಂಭಿಸಿದ್ದಾರೆ.

ಹಾಗಾಗಿ ತಾಲೂಕಿನ ಎಲ್ಲಾ ಕಡೆಗಳಲ್ಲಿ ಸಮಸ್ಯೆ ಎದುರಾಗಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದೆ.
ಲೋಕೋಪಯೋಗಿ ಇಲಾಕೆ ಅಧಿಕಾರಿಗಳು ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡಿ ಬೇಗನೇ ಎಲ್ಲಾ ಕಾಮಗಾರಿ ಮುಗಿಸಿದಲ್ಲಿ ಮಾತ್ರ ಜನರ ಓಡಾಟಕ್ಕೆ ಅನುಕೂಲ ಆಗಲಿದೆ ಎಂಬುದು ಜನರ ಮಾತಾಗಿದೆ.