ಸುದ್ದಿ ಕನ್ನಡ ವಾರ್ತೆ
ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ತೆಂಗಿನ ಮರದ ಪೊಟರೆಯಲ್ಲಿದ್ದ ಭಾರೀ ಗಾತ್ರದ ನಾಗರಹಾವನ್ನು ಯುವ ಉರಗ ಸಂರಕ್ಷಕ ಗಗನ ನಾಯ್ಕ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಬಾವಿಕೇರಿಯ ವಿನಾಯಕ ನಾಯ್ಕ ಅವರ ಮನೆಯ ತೋಟದಲ್ಲಿರುವ ತೆಂಗಿನ ಮರದ ಇಕ್ಕಟ್ಟಾದ ಪೊಟರೆಯೊಳಗೆ ನಾಗರಹಾವು ಕಂಡು ಬಂದಿತ್ತು ಮೇಲ್ನೋಟಕ್ಕೆ ಅದು ಜೋಡಿ ಹಾವುಗಳ ಮಿಲನದಂತೆ ಕಾಣಿಸಿಕೊಂಡ ಕಾರಣ ಸ್ಥಳೀಯರಲ್ಲಿ ಆಸಕ್ತಿ ಮತ್ತು ಭಯ ಉಂಟಾಯಿತು. ಬಹುಕಾಲ ಹಾವು ಕೆಳಗಿಳಿಯದೆ ಅಲ್ಲಿಯೇ ಉಳಿದುಕೊಂಡು, ಹತ್ತಿರ ಹೋಗುವವರಿಗೆ ಭಯ ಬೀಳಿಸುವಂತಿತ್ತು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಗಗನ ನಾಯ್ಕ ನಾಗರಹಾವನ್ನು ಪರಿಶೀಲಿಸಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಬಿಸಿಲಿನ ಬೇಗೆಗೆ ಪ್ರಾಣಿಗಳು ಮನುಷ್ಯ ರಂತೆ ನೆರಳನ್ನು ಬಯಸುತ್ತವೆ.
