ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಗೋಪಾಲಕೃಷ್ಣ ನಾಗೇಶ ಭಾಗ್ವತ್ ಎಂಬುವರ ಮನೆಯಲ್ಲಿ ಅಡಿಕೆ ಕದ್ದಿದ್ದ ಮಂಜುನಾಥ ಮುನ್ನಾ ಮಹೇಶ್ ಸಿದ್ಧಿ (20) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.(Yallapur police have succeeded in arresting the accused Manjunath Munna Mahesh Siddhi (20) who had stolen  bettal nuts from the house of Gopalkrishna Nagesh Bhagwat in Yallapur of Uttara Kannada district).

ಯಾರೊ ಕಳ್ಳರು ಮನೆಯ ಹಿಂಬದಿಯ ಗೋಡೆ ಒಡೆದು ಕನ್ನತನ ಮಾಡಿದ್ದಾರೆ ಎಂದು ಗೋಪಾಲಕೃಷ್ಣ ನಾಗೇಶ್ ಭಾಗ್ವತ್ ಎಂಬುವರು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 8 ರಂದು ಮನೆಯಲ್ಲಿದ್ದ ಸುಮಾರು 3,60000 ರೂ ಮೌಲ್ಯದ 20 ಕ್ವಿಂಟಲ್ ಅಡಿಕೆ ಕಳ್ಳತನವಾಗಿದೆ ಎಂದು ಅವರು ದೂರು ಸಲ್ಲಿಸಿದ್ದರು.

ಬಂಧಿತ ಆರೋಪಿಯನ್ನು ಪೋಲಿಸರು ವಿಚಾರಣೆಗೆ ಒಳಪಡಿಸಿದಾಗ ಈತ ತಾನೇ ಅಡಿಕೆ ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಎಸ್.ಪಿ ಎಂ ನಾರಾಯಣ , ಹೆಚ್ಚುವರಿ ಪೋಲಿಸ್ ಅಧೀಕ್ಷಕ ಜಗದೀಶ ಎಂ,, ಶಿರಸಿಯ ಡಿವೈಎಸ್ ಪಿ ಗಣೇಶ ಕೆ.ಎಲ್, ರವರ ಮಾರ್ಗದರ್ಶನದಲ್ಲಿ ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದರು. ಪೋಲಿಸರು ಈ ಪ್ರಕರಣಕ್ಕೆ ಸಬಂಧಿಸಿದಂತೆ ಹೆಚ್ಚಿನ ತನಿಖಾ ಕಾರ್ಯ ಕೈಗೊಂಡಿದ್ದಾರೆ.