ಸುದ್ದಿ ಕನ್ನಡ ವಾರ್ತೆ
ಸುಮಂತ್ ದೇಸಾಯಿ ಅವರು ಸಿಕಾಸಾ (SICASAA), ಬೆಂಗಳೂರು ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರು ಬೆಂಗಳೂರಿನ 50,000ಕ್ಕೂ ಹೆಚ್ಚು ಸಿಎ ವಿದ್ಯಾರ್ಥಿಗಳನ್ನು ಪ್ರತಿನಿಧಿಸಲಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ದ ಸುಮಂತ ಮೋಹನ ದೇಸಾಯಿ ಕೃಷಿ ಕುಟುಂಬದ ಹುಡುಗ, ಊರಿಗೆ ಬಂದಾಗ ಕೃಷಿ ಚಟುವಟಿಕೆ ಗಳಲ್ಲಿ ಭಾಗವಸುವ ಲವಲವಿಕೆಯ ಹಸನ್ಮುಖಿ ಹುಡುಗ, ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹೆಚ್ಚಿನ ವ್ಯಾಸಂಗ ವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ ಸದ್ಯ ಬೆಂಗಳೂರಿನಲ್ಲಿ ಸಿ ಎ ಮಾಡುತ್ತಿದ್ದಾರೆ, ಅಭ್ಯಾಸ ದ ಜೊತೆಗೆ ಸದಾ ಏನಾದರೊಂದು ಚಟುವಟಿಕೆ ಮಾಡುತ್ತಿರುವ ಸುಮಂತ ಕಳೆದ ವರ್ಷವಿಧಾನ ಸೌಧದಿಂದ ಚಲಿಸಿ ಸೈಕ್ಲಿಂಗ ನಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಮಗನ ಸಾಧನೆಗೆ ತಂದೆ ಮೋಹನ, ತಾಯಿ ಉಷಾ ಸಂತಸ ವ್ಯಕ್ತ ಪಡಿಸಿದ್ದಾರೆ. ತಾಲೂಕಿನ ಜನತೆಗೆ ಇದು ಹರ್ಷ ತಂದಿದ್ದು ಜಿಲ್ಲೆಗೆ ಮೊದಲ ಬಾರಿಗೆ ಸಿಕಾಸಾ ಕಾರ್ಯದರ್ಶಿ ಹುದ್ದೆ ದೊರೆತಿದ್ದೂ ಕೂಡ ಜನತೆಗೆ ಸಂತಸ ತಂದಿದೆ.
ಈ ಕುರಿತು ಮಾತನಾಡಿದ ಸುಮಂತ ತಮ್ಮ ಮೇಲೆ ಇಟ್ಟ ನಂಬಿಕೆಗೆ ಕೃತಜ್ಞತೆ ಸಲ್ಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅವರ ನಾಯಕತ್ವದಲ್ಲಿ ವಿದ್ಯಾರ್ಥಿ ಚಟುವಟಿಕೆಗಳು ಇನ್ನಷ್ಟು ಬಲಗೊಳ್ಳಲಿ ಎಂದು ಜನತೆ ಹಾರೈಸಿದ್ದಾರೆ.
