ಸುದ್ದಿ ಕನ್ನಡ ವಾರ್ತೆ
ಭಟ್ಕಳ: ತಾಲೂಕಿನ ಗ್ರಾಮ
ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ
ದೇವರ ಬ್ರಹ್ಮ ರಥೋತ್ಸವ ಮಾ. 27ರಂದು ಸಂಜೆ ಸಕಲ ಧಾರ್ಮಿಕ ವಿಧಿ ವಿದಾನಗಳ ಮೂಲಕ ಜರುಗಲಿದೆ. ಕಳೆದ ಯುಗಾದಿಯಂದು ಶ್ರೀ ದೇವರ ರಥೋತ್ಸವದ ಕಾರ್ಯಕ್ರಮಕ್ಕೆ ಗರುಡನ ಪಟವನ್ನು ಕಟ್ಟುವ ಮೂಲಕ ಚಾಲನೆ ನೀಡಲಾಗಿದ್ದು ನಂತರ ಪ್ರತಿ ದಿನ ಒಂದೊಂದು ವಾಹನದಲ್ಲಿ ಶ್ರೀ ದೇವರ ಉತ್ಸವಾದಿಗಳು ನಡೆದವು. ಮಾ.25 ಮತ್ತು ಮಾ.26ರಂದು ಉತ್ಸವದ ನಂತರ ರಾತ್ರಿ ಪುಷ್ಪ ರಥೋತ್ಸವ ನಡೆದಿದ್ದು ಮಾ.27ರಂದು ಬೆಳಿಗ್ಗೆ ಬ್ರಹ್ಮ ರಥೋತ್ಸವದ ಅಂಗವಾಗಿ ರಥಾರೋಹಣ ನಡೆಯಲಿದೆ. ಸಂಜೆ 5 ಗಂಟೆಗೆ ಸಾವಿರಾರು ಭಕ್ತರ ಜಯಘೋಷದ ನಡುವೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮಾ.28ರಂದು ಅಶ್ವ ವಾಹನೋತ್ಸವ, ಚೂರ್ಣೋತ್ಸವ ಹಾಗೂ ಅವಭ್ರಥದೊಂದಿಗೆ ಜಾತ್ರೆಗೆ ಸಮಾರೋಪ ನಡೆಯಲಿದೆ. ಮಾ.28ರಂದು ರಾತ್ರಿ 9 ಗಂಟೆಗೆ ಪ್ರತಿ ವರ್ಷದಂತೆ ಯಕ್ಷಗಾನ ಬಯಲಾಟ
ಆಯೋಜಿಸಲಾಗಿದೆ.
